ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ CRDF ಚೇರ್ಮನ್ ಅಮ್ಜದ್ ಖಾನ್ ಭೇಟಿ
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ ಸಿ ಆರ್ ಡಿ ಎಫ್ ಚೇರ್ಮನ್ ಅಮ್ಜದ್ ಖಾನ್ ಪೋಳ್ಯ ಭೇಟಿ ನೀಡಿದರು. ಸಂಸ್ಥೆಯ ಇತ್ತೀಚಿನ ಬೆಳವಣಿಗೆ, ಅಭಿವೃದ್ದಿ ಕಾರ್ಯಕ್ರಮ, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿನಿಯರ ಪರೀಕ್ಷಾ ಫಲಿತಾಂಶಗಳನ್ನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಕೆಲವು ವರ್ಷಗಳ ಬಳಿಕ ಇದೀಗ ಈ ಸಂಸ್ಥೆಯನ್ನು ಸಂದರ್ಶಿಸಿದ್ದು ಇಲ್ಲಿಯ ಅಭಿವೃದ್ಧಿ ಕಂಡು ನನಗೆ ಅಚ್ಚರಿಯಾಗಿದೆ. ಉತ್ತಮ ಕಲಿಕಾ ಗುಣಮಟ್ಟ ಅಳವಡಿಸಿಕೊಂಡು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಉತ್ತಮ ಭರವಸೆಯ ಬೆಳಕು ನೀಡುತ್ತಿರುವ ಈ ಸಂಸ್ಥೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಉಪಾಧ್ಯಕ್ಷ ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಖಾಮಿಲ್ , ಮೆನೇಜರ್ ಉಮರ್ ಆಮ್ಜದಿ, ಮೈಲಾಂಜಿ ಮಾಸಿಕ ಪ್ರಧಾನ ಸಂಪಾದಕ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಸದಸ್ಯರಾದ ಶಂಸುದ್ದೀನ್ ಬೈರಿಕಟ್ಟೆ ಮುಂತಾದವರು ಉಪಸ್ಥಿತರಿದ್ದರು.