ಸೌದಿ ಅರೇಬಿಯಾಗೆ ಭೇಟಿ ನೀಡಿದ ಶಾಸಕ, ಸಚಿವರನ್ನು ಭೇಟಿಯಾದ ಮರ್ಕಝ್ ಸೌದಿ ಸಮಿತಿ ನಾಯಕರು
ದಮ್ಮಾಮ್: ವಿಶ್ವ ಕನ್ನಡ ಸಂಸ್ಕ್ರತಿ ಸಮ್ಮೇಳನದಲ್ಲಿ ಭಾಗವಹಿಸಲು ಸೌದಿ ಅರೇಬಿಯಾಗೆ ಭೇಟಿ ನೀಡಿದ ರಾಜ್ಯ ಸರಕಾರದ ಸಚಿವರಾದ ರಹ್ಮಾನ್ ಖಾನ್, ಸಭಾಪತಿ ಯು.ಟಿ ಖಾದರ್ ಮತ್ತು ಪುತ್ತೂರಿನ ಶಾಸಕರಾದ ಅಶೋಕ ಕುಮಾರ್ ರೈ ಯವರಿಗೆ ದಮ್ಮಾಮ್ ಏರ್ಪೋರ್ಟ್ ನಲ್ಲಿ ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಹಾಜಿ ಕನ್ಯಾನ , ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಳ್ಯ ಮತ್ತು ಮರ್ಕಝುಲ್ ಹುದಾ ಗಲ್ಫ್ ಸಂಚಾಲಕರಾದ ಶಂಸುದ್ದೀನ್ ಬೈರಿಕಟ್ಟೆ ಮುಂತಾದವರು ಸ್ವಾಗತ ನೀಡಿ ಬರಮಾಡಿಕೊಂಡರು.