ಉಮ್ರಾ ಯಾತ್ರೆ ತೆರಳಲಿರುವ ಹಾಜಿ ಇಬ್ರಾಹಿಂ ಸಾಗರ್ ರವರಿಗೆ ಎಸ್‌ಡಿಪಿಐ ವತಿಯಿಂದ ಬೀಳ್ಕೊಡುಗೆ
ಪುತ್ತೂರು: ಪವಿತ್ರ ಉಮ್ರಾ ಯಾತ್ರೆಗೆ ಕುಟುಂಬ ಸಮೇತವಾಗಿ ತೆರಳಲಿರುವ
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರನ್ನು ಪಕ್ಷದ ಕಛೇರಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಕೆ.ಎ ರವರ ನೇತೃತ್ವದಲ್ಲಿ ಶಾಲು ಹೊದಿಸಿ ಶುಭ ಹಾರೈಸಿ ಬೀಳ್ಕೊಡಳಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಕಾರ್ಯದರ್ಶಿ ಉಸ್ಮಾನ್ ಏ.ಕೆ ಪೇರಮೊಗರು,ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಕೊಡಿಪ್ಪಾಡಿ,ಅಬ್ದುಲ್ ರಹೀಂ ಪುತ್ತೂರು,ಹಾಗೂ ಅಶ್ರಫ್ ಸಂಟ್ಯಾರ್ ಉಪಸ್ಥಿತರಿದ್ದರು.
ಡಿಸೆಂಬರ್ 4ರಂದು ಅವರು ಉಮ್ರಾ ಯಾತ್ರೆಗಾಗಿ ಮೆಕ್ಕಾಕ್ಕೆ ತೆರಳಲಿದ್ದಾರೆ.