ಪುತ್ತೂರು: ನವ ವಿವಾಹಿತೆ ಹೃದಯಾಘಾತದಿಂದ ನಿಧನ
ಪುತ್ತೂರು: ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿ ಪುಷ್ಪ (22 ವರ್ಷ) ಹೃದಯಾಘಾತದಿಂದ ನ.7ರಂದು ನಿಧನ ಹೊಂದಿದರು.
ಪುಷ್ಪ ಅವರಿಗೆ ಬೆಳಗ್ಗೆ ಎದೆನೋವು ಕಂಡುಬಂದಿದ್ದು ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆ ಕೊಂಡೊಯ್ಯಲಾಯಿತು. ಅದರೆ ಆಸ್ಪತ್ರೆ ತಲುಪುವ ಮೊದಲೇ ಅರ್ಧದಾರಿಯಲ್ಲಿಯೇ ಮರಣ ಸಂಭವಿಸಿದ ಘಟನೆ ವರದಿಯಾಗಿದೆ.
ಪುಷ್ಪ ಅವರಿಗೆ ಮದುವೆಯಾಗಿ 6 ತಿಂಗಳಷ್ಟೇ ಆಗಿದೆ.
ಮೃತರು ಪತಿ ಸಂತೋಷ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.