ಕರಾವಳಿಕ್ರೈಂ

ಕಡಬ: ತಂದೆಗೆ ಚೂರಿಯಿಂದ ಇರಿದು ಶೂಟೌಟ್, ಪುತ್ರ ಸಾವು

ಕಡಬ: ತಂದೆಗೆ ಚೂರಿ ಇರಿದ ಪುತ್ರ ಬಳಿಕ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ರಾಮಕುಂಜ ಪಾದೆ ಎಂಬಲ್ಲಿ ನಡೆದಿದೆ.

ಜ.24ರಂದು ಘಟನೆ ನಡೆದಿದ್ದು ಮೋಕ್ಷ ಎಂಬವನು  ಮನೆಯೊಳಗೆ ತನ್ನ ತಂದೆ ವಸಂತ್ ಅಮೀನ್ ರವರ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು  ಗಾಯಗೊಂಡ ತಂದೆ ಆಸ್ಪತ್ರೆಗೆ ದಾಖಲಾಗಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಮೋಕ್ಷ ತನ್ನ   ತಂದೆಯ ಹೆಸರಿನಲ್ಲಿ ಪರವಾನಗಿ ಹೊಂದಿರುವ SBBL ಬಂದೂಕಿನಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಬಳಿಕ ಮುಂದೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!