ಕರಾವಳಿ

ಎಲ್ಲರ ಖಾತೆಗೂ ಗೃಹಲಕ್ಷ್ಮಿ ಹಣ ಬರಲಿದೆ, ಭಯ ಬೇಡ ತಾಂತ್ರಿಕ‌ ಸಮಸ್ಯೆಯಿಂದ ಪಾವತಿ ತಡವಾಗಿದೆ- ಅಶೋಕ್ ರೈ
ವಿಟ್ಲ: ಕುಟುಂಬ ನಿರ್ಹವಣೆ ಜೊತೆ ಕುಟುಂಬದ ಹಿತಕ್ಕಾಗಿ ಕೆಲಸ ಮಾಡುವ ಮಹಿಳೆ ಕುಟುಂಬದ ಜೊತೆ ಈ ದೇಶದ ದೊಡ್ಡ ಸಂಪತ್ತಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಮಹಿಳೆಯರು ಸಂಘಟನೆಯ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಿದೆ, ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರಬೇಕು. ಸಣ್ಣ ಉದ್ಯಮಗಳ ಕಡೆ ಹೆಚ್ಚು ಒಲವು ತೋರುವ ಕೆಲಸವನ್ನು‌ಮಾಡಬೇಕು ಮತ್ತು ಸಣ್ಣ ಉದ್ಯಮವನ್ನು ನಡೆಸುವ ಮೂಲಕ ಮಹಿಳೆಯರೂ ಸ್ವಾವಲಂಬಿಗಳಾಗಬೇಕು ಆಗ ಕುಟುಂಬದ ಜೊತೆ ದೇಶವೂ ಅಭಿವೃದ್ದಿಯಾಗುತ್ತದೆ ಎಂದರು.


ವ್ಯಾಪಾರದಲ್ಲಿ ಲಾಭ ನಷ್ಟ ಇದ್ದೇ ಇದೆ ನಷ್ಟವಾದರೆ ಹಿಂದೆ ಸರಿಯಬಾರದು ದಿಟ್ಟತನದಿಂದ ಎದುರಿಸಿ ವ್ಯವಹಾರವನ್ನು ಮಾಡಬೇಕು. ಮಹಿಳೆಯರ ಕೈ ಗಟ್ಟಿಯಾದರೆ ಕುಟುಂಬದ ಆರ್ಥಿಕ ಶಕ್ತಿ ವೃದ್ದಿಯಾಗುತ್ತದೆ ಎಂದು ಶಾಸಕರು ಹೇಳಿದರು.

ತಾಂತ್ರಿಕ‌ಸಮಸ್ಯೆಯಿಂದ ಗೃಹಲಕ್ಷ್ಮಿ ತಡವಾಗಿದೆ: ಹಲವರಿಗೆ ಗೃಹ ಲಕ್ಣ್ಮಿ ಯೋಜನೆ ಹಣ ಖಾತೆಗೆ ಬಂದಿಲ್ಲ.‌ತಾಂತ್ರಿಕ ದೋಷದಿಂದ ತಡವಾಗಿದೆ. ಯೋಜನೆಯನ್ನು ಹ್ಯಾಕ್ ಮಾಡುವ ಕೃತ್ಯವೂ ನಡೆದಿದೆ ಎಲ್ಲವನ್ನೂ ಸರಿಮಾಡಿ ದ ಬಳಿಕ ಎಲ್ಲರ ಖಾತೆಗೂ ಹಣ ಬರಲಿದೆ ಯಾವುದೇ ಭಯ ಬೇಡ ಎಂದು ಶಾಸಕರು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!