ಕರಾವಳಿ

ಕುಂಬ್ರ: ರಸ್ತೆ ದಾಟುತ್ತಿದ್ದ ಶಾಲಾ ವಿದ್ಯಾರ್ಥಿನಿಗೆ ಬೈಕ್ ಡಿಕ್ಕಿ, ಗಾಯ: ಪ್ರಕರಣ ದಾಖಲು



ಪುತ್ತೂರು: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಬೈಕೊಂದು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ನ.8 ರಂದು ಕುಂಬ್ರದಲ್ಲಿ ನಡೆದಿದೆ.

ಕುಂಬ್ರ ಮಗಿರೆ ನಿವಾಸಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 9 ನೇ ತರಗತಿ ವಿದ್ಯಾರ್ಥಿನಿ ಬೆಳಿಗ್ಗೆ ಶಾಲೆಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಕುಂಬ್ರದಿಂದ ಪುತ್ತೂರು ಕಡೆಗೆ ಕೃಷ್ಣಪ್ಪ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ವಿದ್ಯಾರ್ಥಿನಿ ನೆಲಕ್ಕೆ ಬಿದ್ದು ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಕುಂಬ್ರದ ರಿಕ್ಷಾ ಚಾಲಕರಾದ ರಫೀಕ್ ಕಡ್ತಿಮಾರ್ ಮತ್ತು ನಿಝಾರ್‌ರವರು ತಮ್ಮ ರಿಕ್ಷಾದಲ್ಲಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಬೈಕ್ ಸವಾರ ಕೃಷ್ಣಪ್ಪ ಎಂಬವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!