ಕರಾವಳಿ

ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ-ಕರ್ನಾಟಕ ದರ್ಶನ ಹಸ್ತಪ್ರತಿ ಬಿಡುಗಡೆ



ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.  ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಂಝಿ  ಮೊಹಮ್ಮದ್ ಉದ್ಘಾಟಿಸಿದರು. ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಕನ್ನಡ  ರಾಜ್ಯೋತ್ಸವದ ಸಂದೇಶವನ್ನು ನೀಡಿದರು.ಆಡಳಿತ ಸಮಿತಿಯವರು ಮಕ್ಕಳಿಗೆ ಶುಭ ಹಾರೈಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು,  ಶಿಕ್ಷಕರು ಮತ್ತು ಪೋಷಕರರಿಂದ ರಚಿಸಲ್ಪಟ್ಟ ಕರ್ನಾಟಕ ದರ್ಶನ ಎಂಬ ಸುಮಾರು ಒಂದು ಸಾವಿರ  ಪುಟಗಳನ್ನೊಳಗೊಂಡ ಹಸ್ತ ಪ್ರತಿಯ ಮುಖ ಪುಟವನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಕರ್ನಾಟಕದ  ಬಗೆಗಿನ ಲೇಖನಗಳು, ಕಥೆಗಳು, ಕವಿತೆಗಳು, ಸ್ಥಳೀಯ  ಇತಿಹಾಸ, ಭೌಗೋಳಿಕ ಮಾಹಿತಿ, ರಾಜಕೀಯ ಮಾಹಿತಿ, ರೇಖಾಚಿತ್ರಗಳು, ವರ್ಣಚಿತ್ರಗಳು, ಕ್ಯಾಲಿಗ್ರಫಿ ಇತ್ಯಾದಿ  ಒಳಗೊಂಡಿದೆ.

ವಿದ್ಯಾರ್ಥಿಗಳಿಂದ ಸುಂದರವಾದ ಮಾನವ ನಿರ್ಮಿತ  ಕರ್ನಾಟಕ ರಾಜ್ಯದ ಆಕರ್ಷಕ ನಕ್ಷೆಯನ್ನು  ಪ್ರದರ್ಶಿಸಲಾಯಿತು. ಕನ್ನಡ ವಿಭಾಗದ ಶಿಕ್ಷಕಿ ಸುಚಿತ್ರಾ .ಎ ಭಾಷೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಮುಹಮ್ಮದ್ ಅಜೀಂ ಭಾಷಣ ಮತ್ತು ಮುಹಮ್ಮದ್ ಶೈಜ್ ಹಾಡಿನ ಮೂಲಕ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಫಾತಿಮತ್ ಸಹ್ಲಾ ನಿರೂಪಿಸಿದರು. ವಿದ್ಯಾರ್ಥಿ ಮುಹಮ್ಮದ್ ಅಸ್ಲಂ  ಸ್ವಾಗತಿಸಿದರು. ವಿದ್ಯಾರ್ಥಿನಿ ಅಮ್ನ ಫಾತಿಮ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು  ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!