ಕರಾವಳಿ

ಪ್ಲಾಟಿಂಗ್ ಸಮಸ್ಯೆ 15 ದಿನದಲ್ಲಿ ಇತ್ಯರ್ಥ: ಅಶೋಕ್ ರೈ
ಪುತ್ತೂರು: ಕ್ಷೇತ್ರದ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರ ಬಳಿ ಹೇಳಿದ್ದೇನೆ ಅವರು ನಮಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ಹೇಳಿದ್ದಾರೆ. ಈ ಕಾರಣಕ್ಕೆ ಅವರ ಮೇಲೆ ನಮಗೆ ಪೂರ್ಣ ವಿಶ್ವಾಸವೂ ಇದೆ. ಪ್ಲಾಟಿಂಗ್ ಇಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ. ಪ್ಲಾಟಿಂಗ್‌ನಿಂದಾಗಿ ಅನೇಕ ಮನೆಗಳಿಗೆ ಇನ್ನೂ ಡೋರ್ ನಂಬರ್ ಸಿಕ್ಕಿಲ್ಲ, ಕೆಲವು ಮನೆಗಳ ಕೆಲಸಗಳು ಅರ್ಧದಲ್ಲೇ ಬಾಕಿ ಇದೆ . ಪ್ಲಾಟಿಂಗ್ ಸಮಸ್ಯೆ ಹಿಂದಿನ ಸರಕಾರ ಮಾಡಿದ ಕರ್ಮ ಅದರ ಫಲವನ್ನು ಈಗ ನಾವು ಅನುಭವಿಸುವಂತಾಗಿದೆ. ಫ್ಲಾಟಿಂಗ್ ಸಮಸ್ಯೆಯನ್ನು ಅಂದಿನ ಸರಕಾರಕ್ಕೆ ಇತ್ಯರ್ಥ ಮಾಡಬಹುದಿತ್ತು ಅವರು ಆ ಕೆಲಸವನ್ನು ಮಾಡದೇ ಇದ್ದದ್ದು ಇಂದು ಎಲ್ಲರಿಗೂ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೊತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜನರ ಬೇಡಿಕೆ ಯನ್ನು ಈಡೇರಿಸುವ ಕೆಲಸವನ್ನು ಮಾಡುತ್ತೇನೆ ಅದೇ ರೀತಿ ಎಲ್ಲರೂ ಸೇರಿ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!