ಸಂಸದನಾಗಿ ಹೊಸ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರ ಶಕೀಬ್ ಅಲ್ ಹಸನ್ ಅವರು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆಡಳಿತಾರೂಢ ಅವಾಮಿ ಲೀಗ್ ಪಕ್ಷದಿಂದ ಮಗೂರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಕೀಬ್ 1,50,000ಕ್ಕೂ ಅಧಿಕ ಮತಗಳಿಂದ ಪ್ರಚಂಡ ಜಯ ಸಾಧಿಸಿದ್ದಾರೆ. ಈ ಬಾರಿಯ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಶಕೀಬ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.

ಆಡಳಿರೂಢ ಪಕ್ಷದಿಂದ ಸ್ಪರ್ಧಿಸಿದ್ದ ಕಾರಣ ಕಣ ಕುತೂಹಲ ಮೂಡಿಸಿತ್ತು. ಚುನಾವಣಾ ಫಲಿತಾಂಶ ಹೊರಬಿದ್ದಾಗ ತಮ್ಮ ಸಮೀಪದ ಸ್ಪರ್ಧಿ ಖಾಜಿ ರೆಜಾಲ್ ಹುಸೇನ್ ವಿರುದ್ಧ 1,50,000 ಮತಗಳ ಭಾರಿ ಅಂತರದಿಂದ ಶಕೀಬ್ ಅಲ್ ಹಸನ್ ಜಯಗಳಿಸಿದ್ದಾರೆ.
36 ವರ್ಷದ ಶಕೀಬ್ ಅಲ್ ಹಸನ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಕ್ರಿಕೆಟ್ ಜೊತೆಗೆ ರಾಜಕೀಯದಲ್ಲೂ ಹೊಸ ಇನಿಂಗ್ಸ್ ಆರಂಭಿಸಿರುವ ಶಕೀಬ್ ಆರಂಭಿಕ ಯಶಸ್ಸು ಸಾಧಿಸಿದ್ದಾರೆ.
ಬಾಂಗ್ಲಾದೇಶ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 66 ಟೆಸ್ಟ್, 247 ಏಕದಿನ ಮತ್ತು 117 ಟಿ20 ಪಂದ್ಯಗಳನ್ನು ಶಕೀಬ್ ಆಡಿದ್ದಾರೆ.