ಶೇಖ್ ಹಸೀನಾ ವೀಸಾ ರದ್ದುಗೊಳಿಸಿದ ಅಮೆರಿಕ
ಬಾಂಗ್ಲಾ ದೇಶದಲ್ಲಿ ಸಂಭವಿಸಿದ ಕ್ಷಿಪ್ರ ಕ್ರಾಂತಿಯ ಬಳಿಕ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಪಲಾಯನಗೊಂಡಿರುವ ಶೇಖ್ ಹಸೀನಾ ಸದ್ಯಕ್ಕೆ ಭಾರತದಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ. ಸದ್ಯಕ್ಕೆ ಲಂಡನ್ ಆಕೆಗೆ ಆಶ್ರಯ ನೀಡಲು ಸಿದ್ಧವಾಗಿಲ್ಲ. ಮತ್ತೊಂದೆಡೆ ಅಮೆರಿಕಾ ಶೇಖ್ ಹಸೀನಾ ಅವರ ವೀಸಾವನ್ನು ರದ್ದುಗೊಳಿಸುವ ಮೂಲಕ ಅಚ್ಚರಿ ಮೂಡಿಸಿದೆ
ಬಾಂಗ್ಲಾದಿಂದ ಪರಾರಿಯಾಗಿರುವ ಶೇಖ್ ಹಸೀನಾ ಭಾರತದಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಅವರಿಗೆ ಭಾರತದಲ್ಲಿ ಆಶ್ರಯ ನೀಡಿರುವ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸರ್ಕಾರ ರಾಜ್ಯ ಸಭೆಯಲ್ಲಿ ಘೋಷಿಸಿದೆ. ಈ ಹಿಂದೆ 1975ರಲ್ಲಿ ಕೂಡ ಶೇಖ್ ಹಸೀನಾ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ದೆಹಲಿಯಲ್ಲಿ 6 ವರ್ಷಗಳ ಕಾಲ ಆಶ್ರಯ ಪಡೆದಿದ್ದರು.