ವಿನೇಶಾ ಫೋಗಟ್ ಅನರ್ಹತೆ: ಕೂಲಂಕಷ ತನಿಖೆಗೆ ಅಖಿಲೇಶ್ ಯಾದವ್ ಆಗ್ರಹ
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿರುವ ವಿನೇಶಾ ಫೋಗಟ್ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ.
ಫೈನಲ್ ಇಂದು ನಡೆಯಲಿರುವುದರಿಂದ ಬೆಳಿಗ್ಗೆ ಆಕೆಯ ದೇಹ ತೂಕ ಪರೀಕ್ಷಿಸುವ ಸಂದರ್ಭ ಆಕೆ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿದ್ದಾರೆಂಬುದು ತಿಳಿದು ಬಂದಿದ್ದು, ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಅವರ ತೂಕದಲ್ಲಿ 100 ಗ್ರಾಂವರೆಗೆ ಹೆಚ್ಚಳವಾಗಿದೆ ಎನ್ನಲಾಗಿದೆ. ಒಲಿಂಪಿಕ್ ಕುಸ್ತಿಯಲ್ಲಿ ಫೈನಲ್‌ಗೇರಿದ ಭಾರತದ ಮೊದಲ ಕ್ರೀಡಾಪಟು ಎಂಬ ಖ್ಯಾತಿಗೆ ವಿನೇಶಾ ಪಾತ್ರರಾಗಿದ್ದರು.
ಅಧಿಕ ತೂಕದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಆಡಲು ಅವಕಾಶ ಸಿಗದೆ ಅನರ್ಹಗೊಂಡ ಭಾರತದ ಕುಸ್ತಿ ಪಟು ವಿನೇಶಾ ಫೋಗಟ್ ಪ್ರಕರಣದ ಕೂಲಂಕಷ ತನಿಖೆಗೆ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
‘ವಿನೇಶಾ ಫೋಗಟ್‌ಗೆ ಫೈನಲ್‌ನಲ್ಲಿ ಆಡಲು ಅವಕಾಶ ನೀಡದೇ ಇರುವುದಕ್ಕೆ ಕಾರಣವಾದ ತಾಂತ್ರಿಕ ಕಾರಣಗಳ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಇದರ ಹಿಂದಿರುವ ಸತ್ಯ ಮತ್ತು ನಿಜವಾದ ಕಾರಣ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.