ರಾಜ್ಯ ಮಟ್ಟದ ದಸರಾ ತ್ರೋಬಾಲ್‌ನಲ್ಲಿ ಮೈಸೂರು ವಿಭಾಗ ತಂಡ ಪ್ರಥಮ
ಪುತ್ತೂರು: ಕರ್ನಾಟಕ ಸರಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೈಸೂರು ವಿಭಾಗ ತಂಡ ಪ್ರಥಮ ಸ್ಥಾನ ಪಡೆದಿದೆ. ಸತತ ಏಳನೇ ಬಾರಿಗೆ ಸ್ವರ್ಣ ಪದಕ ತನ್ನದಾಗಿಸಿಕೊಂಡಿದೆ.

ತಂಡದಲ್ಲಿ ಪುತ್ತೂರು ತಾಲೂಕಿನ ಪಟ್ಟೆ ಪ್ರತಿಭಾ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ವಿವಿಧ ಭಾಗದ ಕ್ರೀಡಾಪಟುಗಳು ಭಾಗವಹಿಸಿದ್ದರು. ಅ. 10ರಿಂದ 13 ರ ತನಕ ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆದಿದೆ.
ಪಟ್ಟೆ ಪ್ರತಿಭಾ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ. ತಂಡದ ಮುಖ್ಯ ತರಬೇತುದಾರರಾಗಿದ್ದರು.
ತಂಡದ ನಾಯಕಿಯಾಗಿ ಅಂತಾರಾಷ್ಟ್ರಿಯ ತ್ರೋಬಾಲ್ ಕ್ರೀಡಾಪಟು ಪುತ್ತೂರು ಸೈಂಟ್ ವಿಕ್ರ‍್ಸ್ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪೂರ್ಣಿಮಾ ತಂಡವನ್ನು ಮುನ್ನಡೆಸಿದ್ದರು.