ರಾಷ್ಟ್ರೀಯ

ಸೆಮಿ ಹೈಸ್ಪೀಡ್ ‘ನಮೋ ಭಾರತ್’ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿಭಾರತದ ಪ್ರಪ್ರಥಮ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ವ್ಯವಸ್ಥೆಯಾದ ‘ನಮೋ ಭಾರತ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದಲ್ಲಿ ಹಸಿರು ನಿಶಾನೆ ತೋರಿದರು.

ಉತ್ತರ ಪ್ರದೇಶದ ಸಾಹಿಬಾಬಾದ್ ನಿಂದ ದುಹೈ ಡಿಪೊವನ್ನು ಸಂಪರ್ಕಿಸುವ ‘ನಮೊ ಭಾರತ್’ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.

ಇದು ಅಂತರ ನಗರಗಳ ನಡುವೆ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಅತಿ ವೇಗದ ರೈಲುಗಳ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ರೈಲು ಸೇವೆಯನ್ನು ಅಗತ್ಯಕ್ಕನುಗುಣವಾಗಿ ಪ್ರತಿ ಐದು ನಿಮಿಷಕ್ಕೊಮ್ಮೆ ವಿಸ್ತರಿಸಬಹುದಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!