ಅಂತಾರಾಷ್ಟ್ರೀಯಕ್ರೀಡೆ

ಗರಿಷ್ಠ ಸಿಕ್ಸರ್: ಮತ್ತೊಂದು ದಾಖಲೆ ಬರೆದ ರೋಹಿತ್ ಶರ್ಮಾ



ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತನ್ನ ಇನ್ನೊಂದು ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 300 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅವರು ತನ್ನ ಇನಿಂಗ್ಸ್ ನಲ್ಲಿ ನಾಲ್ಕನೇ ಸಿಕ್ಸ್ ಬಾರಿಸಿದಾಗ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡರು. 300ಕ್ಕಿಂತಲೂ ಅಧಿಕ ಏಕದಿನ ಸಿಕ್ಸರ್ ಗಳನ್ನು ಬಾರಿಸಿದ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಮತ್ತು ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿಯನ್ನೊಳಗೊಂಡ ಗುಂಪಿಗೆ ರೋಹಿತ್ ಶರ್ಮ ಸೇರ್ಪಡೆಗೊಂಡರು.

ಭಾರತದಲ್ಲಿ ಏಕದಿನ ಸಿಕ್ಸರ್ ಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವವರು ಮಾಜಿ ನಾಯಕ ಎಮ್.ಎಸ್. ಧೋನಿ. ಅವರು 229 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.300ಕ್ಕೂ ಅಧಿಕ ಏಕದಿನ ಸಿಕ್ಸರ್ ಗಳನ್ನು ಬಾರಿಸಿರುವ ಕ್ರಿಕೆಟಿಗರ ಪಟ್ಟಿಯಲ್ಲಿ, ಶಾಹಿದ್ ಅಫ್ರಿದಿ 351 ಸಿಕ್ಸರ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 331 ಸಿಕ್ಸರ್ ಗಳನ್ನು ಸಿಡಿಸಿರುವ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ. ಈಗ 300 ಸಿಕ್ಸರ್ ಗಳೊಂದಿಗೆ ರೋಹಿತ್ ಶರ್ಮಾ ಮೂರನೇ ಸ್ಥಾನವನ್ನು ಸಂಪಾದಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!