ಕರಾವಳಿ

ಸುಳ್ಯ :ಗಾಂಧಿನಗರ ಈದ್ ಮಿಲಾದ್ ಸಂಭ್ರಮ 2023 ಕನ್ಸೋಲಿಯಂ: 6 ದಿನಗಳ ಮೀಲಾದ್ ಫೆಸ್ಟ್ ಗೆ ಚಾಲನೆ



ಸುಳ್ಯ :ಗಾಂಧಿನಗರ ಜುಮಾ ಮಸ್ಜಿದ್ ನಲ್ಲಿ ಈದ್ ಮಿಲಾದ್ ದಿನಾಚರಣೆಯ ಅಂಗವಾಗಿ ಮದರಸಾ ಮತ್ತು ದರ್ಸ್ ವಿದ್ಯಾರ್ಥಿಗಳ 6 ದಿನಗಳ ಕಲಾ ಸಾಹಿತ್ಯ ಹಾಗೂ ಸಾoಸ್ಕೃತಿಕ ಪ್ರತಿಭಾ ಪ್ರದರ್ಶನಕ್ಕೆ ಗಾಂಧಿನಗರ ಮದರಸ ವಠಾರದಲ್ಲಿ ಸೆಪ್ಟೆಂಬರ್ 23ರಂದು ಚಾಲನೆ ನೀಡಲಾಯಿತು.

ಸುಳ್ಯದ ಕೇಂದ್ರ ಜುಮಾ ಮಸ್ಜಿದ್ ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಮತ್ತು ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ
ಮದರಸ ಜಂಟಿ ಆಶ್ರಯದಲ್ಲಿ ಆರು ದಿನಗಳು ಈ ಮೀಲಾದ್ ಸಂಭ್ರಮ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಗಾಂಧಿನಗರ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ ವಹಿಸಿದ್ದರು.
ಸ್ಥಳೀಯ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುಃವಾ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಹಾಜಿ ಕೆ. ಎಂ.ಮಹಮ್ಮದ್ ಕೆಎಂಎಸ್, ಪ್ರದಾನ ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್,ಖಜಾಂಚಿ ಹಾಜಿ ಮುಹಿಯದ್ದೀನ್ ಫ್ಯಾನ್ಸಿ, ಮದರಸ ಉಸ್ತುವಾರಿಗಳಾದ ಕೆ. ಬಿ. ಅಬ್ದುಲ್ ಮಜೀದ್,ಹಮೀದ್ ಬೀಜಕೊಚ್ಚಿ, ನಿರ್ದೇಶಕರು ನಗರ ಪಂಚಾಯತ್ ಸದಸ್ಯರೂ ಆದ ಕೆ. ಎಸ್. ಉಮ್ಮರ್,ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್,ಅನ್ಸಾರಿಯಾ ಎಜುಕೇಶನ್ ಸೆಂಟರ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಅರ್ಲಡ್ಕ,ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಗಾಂಧಿನಗರ ಮದರಸ ಸದರ್ ಮುಅಲ್ಲಿಮ್ ಇಬ್ರಾಹಿಂ ಸಖಾಫಿ ಪುಂಡೂರ್ ಮೊದಲಾದವರು ಉಪಸ್ಥಿತರಿದ್ದರು.

ಸಹಾಯಕ ಸದರ್ ಮುಅಲ್ಲಿಮ್ ಅಬ್ದುಲ್ ಖಾದರ್ ಮುಸ್ಲಿಯಾರ್ ಸ್ವಾಗತಿಸಿ ಮದರಸ ಅಧ್ಯಾಪಕರಾದ ನಿಸಾರ್ ಸಖಾಫಿ ವಂದಿಸಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!