ಕರಾವಳಿರಾಜಕೀಯ

ಬಡವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ , ಯೋಜನೆಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ : ಕೆ ಗೋಕುಲ್ ದಾಸ್



ಎಲ್ಲಾ ಸರಕಾರಗಳೂ ನಡೆಯುವುದೇ ಜನರ ತೆರಿಗೆಯಿಂದಲೇ, ಬಿಜೆಪಿ ಸರಕಾರ, ಕೇಂದ್ರ ಸರಕಾರ ಜನರ ತೆರಿಗೆಯನ್ನು ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ನೀಡುತ್ತಿದ್ದರೆ, ನಮ್ಮ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರಿಗೆ, ಮಹಿಳೆಯರಿಗೆ ನೀಡುತ್ತಿದ್ದಾರೆ. ಆ ಮೂಲಕ ಬಡವರ, ರಾಜ್ಯದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ. ಇದನ್ನು ಮಾಡಲು ಇಚ್ಛಾಶಕ್ತಿ ಬೇಕು. ಬಿಜೆಪಿಯವರಿಗೆ ಇಚ್ಚಾಶಕ್ತಿಯ ಕೊರತೆ ಇದೆ. ಅವರಿಂದ ಇದನ್ನು ನಿರೀಕ್ಷೆಯನ್ನು ಮಾಡಬೇಕಾಗಿಲ್ಲ. ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆ ಗೋಕುಲ್ ದಾಸ್ ತಿಳಿಸಿದ್ದಾರೆ.

ಸುಳ್ಯದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಮ್ಮ ಪಕ್ಷದಲ್ಲಿ ಉಚ್ಚಾಟನೆ, ಶೋಕಾಸ್ ನೋಟಿಸ್ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಆಂತರಿಕ ವಿಷಯ. ನಾವೆಲ್ಲರೂ ಈಗಾಗಲೇ ಜಾರಿಯಾಗಿರುವ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ, ಸಂಘಟನೆಯಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಬಿಜೆಪಿಯವರು ಮೊದಲು ತಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಲಿ. ಸರಕಾರ ಬಂದು 117ದಿನ ಕಳೆದರೂ ಸಹ ಒಬ್ಬ ವಿಪಕ್ಷ ನಾಯಕನನ್ನು ಮಾಡಲು ಆಗಿಲ್ಲ. ಹೊಸ ರಾಜ್ಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯ ಇಲ್ಲದವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!