ಅಂತಿಮ ಸಂಸ್ಕಾರಕ್ಕೆ ಬ್ಲಾಕ್ ಕಾಂಗ್ರೆಸ್ ನಿಂದ ನೆರವು
ಪುತ್ತೂರು: ಸೆ.26ರಂದು ನಿಧನರಾದ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ನಿವಾಸಿ ಕೂಲಿ ಕಾರ್ಮಿಕ ಪೊಡಿಯ ( 65) ರವರ ಅಂತಿಮ ಸಂಸ್ಕಾರಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾ ಸಹಾಯ ಹಸ್ತ ನಿಧಿಯ ಮೂಲಕ ಆರ್ಥಿಕ ನೆರವು ನೀಡಲಾಯಿತು.

ಶಾಸಕ ಅಶೋಕ್ ರೈ ಅವರ ಸೂಚನೆ ಮೇರೆಗೆ ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ನೆರವು ವಿತರಿಸಿದರು.
ಈ ವೇಳೆ ಅವಿನಾಶ್ ರೈ ಕುಡ್ಚಿಲ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಉಪಸ್ಥಿತರಿದ್ದರು.