ಸಾಕು ಬೆಕ್ಕು ಕಚ್ಚಿ ಮಹಿಳೆ ದಾರುಣ ಸಾವು
ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ. 50 ವರ್ಷ ವಯಸ್ಸಿನ ಗಂಗೀಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಎರಡು ತಿಂಗಳ ಹಿಂದೆ ಮಹಿಳೆಗೆ ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆ ಬಾಧಿಸಿ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯ ಕಾಲಿಗೆ ಬೆಕ್ಕು ಕಚ್ಚಿದ್ದರಿಂದ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದ ಮಹಿಳೆ ಚೇತರಿಸಿಕೊಂಡಿದ್ದರು.
ಹಾಗಾಗಿ ಮಹಿಳೆ ಚೇತರಿಕೆ ಕಂಡ ಹಿನ್ನೆಲೆ ಇಂಜೆಕ್ಷನ್ ಪಡೆಯದೆ ಸುಮ್ಮನಾಗಿದ್ದರು ಎನ್ನಲಾಗಿದೆ.