ಪಣೆಮಜಲಿನಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಕ್ರೀಡಾ ಸ್ಪೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು– ಹೈದರ್ ಅಲಿ
ಪುತ್ತೂರು: ಕ್ರೀಡೆಗಳಲ್ಲಿ ನಾವು ಕಾಣುವ ಕೆಳಗೆ ಬಿದ್ದವರನ್ನು ಕೈ ಹಿಡಿದು ಮೇಲೆತ್ತುವ, ಧರ್ಮ- ಜಾತಿ ಭೇದವಿಲ್ಲದೆ ಒಂದು ತಂಡವಾಗಿ-ಗೆಲುವೇ ಮುಖ್ಯವಾಗಿ ಆಡುವ,ಸೋಲನ್ನು ಒಪ್ಪಿಕೊಳ್ಳುವ,ಗೆಲುವನ್ನು ಹಂಚಿಕೊಳ್ಳುವ ಗುಣಗಳನ್ನು ನಾವು ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು” ಎಂದು ಲೇಖಕ ಹೈದರ್ ಅಲಿ ಐವತ್ತೊಕ್ಲು ಹೇಳಿದರು.
ಅವರು We Are Friends,ಪಣೆಮಜಲು ಇದರ ಆಶ್ರಯದಲ್ಲಿ ನಿನ್ನೆ ಪಣೆಮಜಲು ನಲ್ಲಿ ಜರುಗಿದ “ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ”ವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ತಂಡಗಳ ನಡುವೆ ನಡೆದ ಪಂದ್ಯಕೂಟದಲ್ಲಿ “ಪಳ್ಳತಮೂಲೆ ಗೈಸ್” ಪ್ರಥಮ ಹಾಗೂ “ಕುಕ್ಕುಜೆ ಅಟ್ಯಾಕರ್ಸ್ “ದ್ವಿತೀಯ ಬಹುಮಾನ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಹಿರಿಯ ಆಟಗಾರ ಅಬ್ದುಲ್ ರಹಿಮಾನ್ ಸಮಹಾದಿ(ಅದ್ದು)ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಅಬ್ಬಾಸ್ ಆರ್ತಿಕೆರೆಯವರು ಬಹುಮಾನ ವಿತರಿಸಿದರು.
ಜಾಫರ್ ಹಾಜಿ ಬೇರಿಕೆ,ಉಮ್ಮರ್ ಕುಕ್ಕುಜೆ,ಸುಲೈಮಾನ್ ಪಳ್ಳತಮೂಲೆ, ಮಹಮ್ಮದ್ ಕುಂಞಿ ಬಾಬ ಮೊದಲಾದವರು ಉಪಸ್ಥಿತರಿದ್ದರು.
ವಿ.ಆರ್.ಫ್ರೆಂಡ್ಸ್ ನ ಸಮೀರ್ ಸಿರಾಜ್ ಸ್ವಾಗತಿಸಿ,ಇಬ್ರಾಹಿಂ ಪಣೆಮಜಲು ಧನ್ಯವಾದ ಸಮರ್ಪಿಸಿದರು.
ಮಹಮ್ಮದ್ ಫವಾಝ್,ಸಿದ್ದೀಕ್ ಪಳ್ಳತಮೂಲೆ, ಡಾ.ಮಹಮ್ಮದ್ ಅಲಿ,ಸ್ವಾಲಿಹ್ ಬೇರಿಕೆ ಮೊದಲಾದವರು ಸಹಕರಿಸಿದರು.