ಕುಂಬ್ರದಲ್ಲಿ ಕಳ್ಳತನ: ಸರಕಾರಿ ಕಚೇರಿ, ಶಾಲೆಗೆ ನುಗ್ಗಿದ ಕಳ್ಳರು
ಪುತ್ತೂರು: ಕುಂಬ್ರದಲ್ಲಿ ಸೆ.4ರಂದು ತಡರಾತ್ರಿ ಕಳ್ಳತನ ನಡೆದಿದ್ದು ಸರಕಾರಿ ಕಚೇರಿ, ಶಾಲೆಗಳಿಗೆ ಕಳ್ಳರು ನುಗ್ಗಿರುವ ಘಟನೆ ನಡೆದಿದೆ.ಒಳಮೊಗ್ರು ಗ್ರಾ.ಪಂ ಕಚೇರಿ, ಗ್ರಾಮ ಆಡಳಿತಾಧಿಕಾರಿ ಕಚೇರಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಕಳ್ಳರು ನುಗ್ಗಿದ್ದಾರೆ.
ಗ್ರಾ.ಪಂ ಕಚೇರಿಯಲ್ಲಿದ್ದ ಸಿಸಿ ಕ್ಯಾಮರಾದ ಡಿವಿಆರ್ ಕದ್ದೊಯ್ದಿದ್ದಾರೆ. ಅಲ್ಲದೇ ಕಪಾಟನ್ನು ಜಾಲಾಡಿ ದ್ದಾರೆ. ಗ್ರಾ.ಪಂ ಕಚೇರಿ ಮತ್ತು ಕುಂಬ್ರ ಪಬ್ಲಿಕ್ ಸ್ಕೂಲ್‌ನ ಬೀಗ ಒಡೆದ ಕಳ್ಳರು ಒಳ ಪ್ರವೇಶಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಾದ ಸಚಿನ್ ಮತ್ತು ತಂಡ ಹಾಗೂ ಸಂಪ್ಯ ಠಾಣಾ ಎಸ್ಸೈ ಧನಂಜಯ ಬಿ.ಸಿ ಮತ್ತು ಸಿಬ್ಬಂದಿಗಳಿಂದ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಸಾರ್ವಜನಿಕರು ಜಮಾಯಿಸಿದ್ದಾರೆ.
ಕಳ್ಳರು ಸರಕಾರಿ ಕಚೇರಿ ಮತ್ತು ಶಾಲೆಯನ್ನು ಗುರಿಯಾಗಿಸಿ ಯಾಕೆ ಕಳ್ಳತನಕ್ಕೆ ಪ್ರಯತ್ನಪಟ್ಟಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.