ಕರಾವಳಿ

ಬಲೆಗೆ ಬಿದ್ದ ಭಾರೀ ಉದ್ದದ ಬಂಗುಡೆಕಾರವಾರ: ಮೀನುಗಾರರು ಬೀಸಿದ ಬಲೆಗೆ 48 ಸೆಂಟಿ ಮೀಟರ್ ಉದ್ದದ ಬಂಗುಡೆ ಮೀನು ಸಿಕ್ಕಿದ್ದು, ದೇಶದಲ್ಲೇ ಅತೀ ದೊಡ್ಡದು ಎನ್ನಬಹುದಾದ ಬಂಗುಡೆ ರವಿವಾರ ಸಿಕ್ಕಿದೆ. ಈ ಬಂಗುಡೆ 19 ಇಂಚು ಉದ್ದ, 4.5 ಇಂಚು ಅಗಲ ಇದೆ. ಅದರ ತೂಕ ಒಂದು ಕೆ.ಜಿ. ಇದೆ.

ಭಾರತದಲ್ಲಿ ಈತನಕ 32 ಸೆಂಮೀ, 42 ಸೆಂಮೀ ಉದ್ದದ ಬಂಗುಡೆ ಸಿಕ್ಕಿತ್ತು ಎಂದು ದಾಖಲಾಗಿದ್ದು ಈಗ ಸಿಕ್ಕಿದ ಬಂಗುಡೆ ಮೀನು ಆ ದಾಖಲೆ ಮುರಿದು, ಹೊಸ ದಾಖಲೆ‌ ಬರೆದಿದೆ. ಇದು ನವೀನ್ ಎಂಬವರರಿಗೆ ಸಿಕ್ಕಿತ್ತು. ಇದನ್ನು ಕಡಲಜೀವಶಾಸ್ತ್ರ ವಿಭಾಗದ ಶಿವಕುಮಾರ್ ಹರಗಿ ಎಂಬ ಉಪನ್ಯಾಸಕರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅವರು ಈ ದೊಡ್ಡ ಬಂಗುಡೆ ರಕ್ಷಿಸಿ ಇಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!