ಕರಾವಳಿ

ದಕ ಎಸ್ ಪಿ, ಕಮಿಷನರ್ ವರ್ಗಾವಣೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳ ನೇಮಕ ಆಗಿದೆ. ಈಗಿರುವ ಎಸ್ಪಿ ಯತೀಶ್ ಹಾಗೂ ಕಮೀಷನರ್ ಅಗರ್’ವಾಲ್ ವರ್ಗಾವಣೆಗೊಂಡಿದ್ದಾರೆ.

2017ರಲ್ಲಿ ದಕ ಎಸ್ಪಿಯಾಗಿದ್ದ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಮಂಗಳೂರು ಕಮೀಷನರ್ ಆಗಿ ಬರುತ್ತಿದ್ದಾರೆ. ಅದೇ ರೀತಿ ಉಡುಪಿಯ ಎಸ್ಪಿಯಾಗಿರುವ ಅರುಣ್ ಕುಮಾರ್ ಅವರು ದಕ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.


ದ.ಕದಿಂದ ಬೆಳಗಾವಿಗೆ ಎಸ್ಪಿಯಾಗಿ ತೆರಳಿದ ಸುಧೀರ್ ಕುಮಾರ್ ರೆಡ್ಡಿ ಅವರು, ನಂತರ ಆಂಧ್ರಕ್ಕೆ ವರ್ಗಾವಣೆ ಆಗಿದ್ದರು. ನಂತರ ರಾಜ್ಯದ ಗುಪ್ತಚರ ವಿಭಾಗದ ಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಬೂದಿ ಮುಚ್ಚಿದ ಕೆಂಡದಂತಿರುವ ದ.ಕ.ಕ್ಕೆ ಕಮೀಷನರ್ ಆಗಿ ಬರುತ್ತಿದ್ದಾರೆ.

ಅರುಣ್ ಕುಮಾರ್ ಕೂಡ ಉಡುಪಿಯಲ್ಲಿ ತಮ್ಮ ಐಪಿಎಸ್ ಪವರ್ ತೋರಿಸಿದ್ದು ಜನರಿಗೆ ವಿಶ್ವಾಸ ಮೂಡುವಂತಹ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!