ಸುಳ್ಯ: ಐರಾವತ ಬಸ್-ಆಂಬ್ಯುಲೆನ್ಸ್ ನಡುವೆ ಡಿಕ್ಕಿ ಆಂಬ್ಯುಲೆನ್ಸ್ ಜಖಂ
ಸುಳ್ಯ ತಾಲೂಕು ಪಾಲಡ್ಕ ಬಳಿ ಅಂಬುಲೆನ್ಸ್ ವಾಹನ ಮತ್ತು ಐರಾವತ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿ ಆಂಬುಲೆನ್ಸ್ ವಾಹನ ಜಖಂ ಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.
Read Moreಸುಳ್ಯ ತಾಲೂಕು ಪಾಲಡ್ಕ ಬಳಿ ಅಂಬುಲೆನ್ಸ್ ವಾಹನ ಮತ್ತು ಐರಾವತ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿ ಆಂಬುಲೆನ್ಸ್ ವಾಹನ ಜಖಂ ಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.
Read Moreಬೆಳ್ತಂಗಡಿ: ಮಾಲಾಡಿ ಗ್ರಾಮದ ಬನಂತಾಡಿ ಸಮೀಪ ಆಟೋ ರಿಕ್ಷಾವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಒಂದು ವರ್ಷದ ಗಂಡು ಮಗು ಸಾವನ್ನಪ್ಪಿದ ಘಟನೆ ಮಾಲಾಡಿಯಲ್ಲಿ
Read Moreಕಳೆದ ಎರಡು ವರ್ಷಗಳಿಂದ ಸುಳ್ಯದಲ್ಲಿ ದಿಟ್ಟ, ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ ಯವರು ಕುಂದಾಪುರ ತಾಲೂಕು ಕಚೇರಿಗೆ ತಹಶೀಲ್ದಾರರಾಗಿ ವರ್ಗಾವಣೆಗೊಂಡಿರುತ್ತಾರೆ. ಮುಂಬರುವ
Read Moreಮಂಗಳೂರು: ತಾಯಿ ಬುದ್ದಿವಾದ ಹೇಳಿದ್ದಕ್ಕೆ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಮುರ ಎಂಬಲ್ಲಿ ನಡೆದಿದೆ. ಮೊಬೈಲ್ ಬಳಸದಂತೆ
Read Moreಕೇಂದ್ರ ಗೃಹ ಸಚಿವ, ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಫೆ.11ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ತೆಂಕಿಲ
Read Moreಪುತ್ತೂರು: ನರಿಮೊಗರು ನಿವಾಸಿಯಾಗಿದ್ದು ಮಂಗಳೂರು ಕೆ.ಎಸ್.ರಾವ್ ರಸ್ತೆಯ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಅಕೌಂಟ್ ಸೆಕ್ಷನ್‌ನಲ್ಲಿ ಉದ್ಯೋಗಿಯಾಗಿದ್ದ ಜಗದೀಶ್ ರೈ(51.ವ) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಗದೀಶ್ ರೈ ಅವರು ಬೋಳಾರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಕಳೆದ 23 ವರ್ಷಗಳಿಂದ ಉದ್ಯೋಗಿಯಾಗಿದ್ದ ಅವರು ಬೋಳಾರದ ಅಪಾರ್ಟ್ಮೆಂಟ್‌ನಲ್ಲಿ ನೆಲೆಸಿದ್ದರು. ಪತ್ನಿ ರೇಖಾ ಅವರು ಮಂಗಳೂರಿನ ಪಿಎಫ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮೃತರು ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಅಕ್ಷಣ್ ರೈ ಹಾಗೂ ಪುತ್ರಿ ಆದಿತ್ರಿ ಅವರನ್ನು ಅಗಲಿದ್ದಾರೆ. ಡೆತ್‌ನೋಟ್ ಬರೆದಿದ್ದು ಆತ್ಮಹತ್ಯೆ: ನನ್ನ ಸಾವಿಗೆ ನಾನೇ ಕಾರಣ. ತಾಯಿ ಮತ್ತು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇಂಜಿನಿಯರಿಂಗ್ ಓದುವ ಪುತ್ರ ಅಕ್ಷಣ್ ರೈಯವರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಗದೀಶ್ ರೈ ದಂಪತಿಗೆ ಯಾವುದೇ ಹಣಕಾಸಿನ ತೊಂದರೆ ಇರಲಿಲ್ಲ. ಜಗದೀಶ್ ಅವರಿಗೆ ಯಾವುದೇ ದುರಭ್ಯಾಸವೂ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದು ಆದರೂ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಮೃತರ ನರಿಮೊಗರುವಿನ ಮನೆಗೆ ಶಾಸಕ ಸಂಜೀವ ಮಠಂದೂರು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತರಾಮ ರೈ ಸವಣೂರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಜಯರಾಮ ಪೂಜಾರಿ ನರಿಮೊಗರು, ಪ್ರವೀಣ್ ನಾಯ್ಕ ಸೇರಾಜೆ, ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.
Read Moreಪುತ್ತೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಕಲ್ಲೇಗ ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವ ಮಾಹಿತಿ ಲಭ್ಯವಾಗಿದೆ. ಅಶ್ರಫ್ ಕಲ್ಲೇಗ ಆವರು ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನೇ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಲು ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಜ.30ರಂದು ಪುತ್ತೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲೂ ಅಶ್ರಫ್ ಕಲ್ಲೇಗ ಪರವಾಗಿ ಕಾರ್ಯಕರ್ತರು ಬ್ಯಾಟ್ ಬೀಸಿದ್ದು ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರಲ್ಲೂ ಅಶ್ರಫ್ ಕಲ್ಲೇಗರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅಶ್ರಫ್ ಕಲ್ಲೇಗ ಅವರು ಈ ಹಿಂದೆಯೇ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬೇರೆಯವರಿಗೆ ಟಿಕೆಟ್ ಸಿಕ್ಕಿದರೂ ಮುನಿಸಿಕೊಳ್ಳದ ಅಶ್ರಫ್ ಕಲ್ಲೇಗ ಅವರು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದರು. ಮಾತ್ರವಲ್ಲದೇ ಯಾವುದೇ ಸಂದರ್ಭದಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆಸದೆ ಕ್ಲೀನ್ ಇಮೇನ್ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಟಿಕೆಟ್ ಖಚಿತ ಎನ್ನುವ ಮಾತುಗಳು ಬಲವಾಗಿ ಕೇಳಿ ಬಂದಿದೆ. ಜೆಡಿಎಸ್ ಅಭ್ಯರ್ಥಿ ಸ್ಥಾನಕ್ಕೆ ಅಶ್ರಫ್ ಕಲ್ಲೇಗ ಮಾತ್ರವಲ್ಲದೇ ಪಕ್ಷದ ಪ್ರಮುಖರಾದ ಮೀರಾ ಸಾಹೇಬ್ ಕಡಬ, ಐ.ಸಿ ಕೈಲಾಸ್, ಇಬ್ರಾಹಿಂ ಗೋಳಿಕಟ್ಟೆ ಅವರ ಹೆಸರೂ ಕೇಳಿ ಬರುತ್ತಿದೆ. ಆದರೆ ಯಾವುದೂ ಅಂತಿಮವಾಗಿಲ್ಲ.
Read Moreಮಂಗಳೂರು: ವಿದೇಶಿ ಕರೆನ್ಸಿ ಮತ್ತು ಚಿನ್ನ ನೀಡುವುದಾಗಿ ಹೇಳಿ ಹಣ ಪಡೆದು ಕಾಗದದ ಕಟ್ಟನ್ನು ನೀಡಿ 4 ಲ.ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಮುಡಿಪು ಜಂಕ್ಷನ್‌ನಲ್ಲಿರುವ ತಾಜ್‌ಬುಕ್
Read Moreಕೊಡಗು ಜಿಲ್ಲಾ ನೂತನ ಎಸ್ಪಿಯಾಗಿ ಕೆ. ರಾಮರಾಜನ್ ನೇಮಕ ಗೊಂಡಿದ್ದಾರೆ. ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿಯಾಗಿದ್ದ ಕೆ. ರಾಮರಾಜನ್ ರವರನ್ನುನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.
Read Moreಪುತ್ತೂರು: ಕಂಬಳ ಗದ್ದೆಯಲ್ಲಿ ಪ್ರೇಯಸಿಯೊಂದಿಗೆ ಮಾತನಾಡಿಕೊಂಡಿದ್ದ ಮಂಗಳೂರಿನ ಯುವಕನನ್ನು ಯುವತಿಯ ಮಾಜಿ ಪ್ರೇಮಿ, ಆತನ ಸ್ನೇಹಿತರೊಂದಿಗೆ ಸೇರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿರುವ ಕುರಿತು ಪುತ್ತೂರು
Read More