105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯುವಕ
ಯುವಕನೋರ್ವ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮದ 34 ವರ್ಷದ ಹನುಮಂತಪ್ಪ ಪೂಜಾರ ಅಂಜನಾದ್ರಿ ಬೆಟ್ಟ ಏರಿದ ಯುವಕ.
ಹನುಮಂತಪ್ಪ ಪೂಜಾರ ಮೊದಲ ಬಾರಿಗೆ ಬೆಟ್ಟ ಹತ್ತಿದ ನೆನಪನ್ನು ಸ್ಮರಣೀಯವಾಗಿರಿಸಬೇಕು ಎಂಬ ಕಾರಣಕ್ಕೆ ಅಕ್ಕಿಚೀಲ ಹೊತ್ತು ಹತ್ತಲು ನಿರ್ಧರಿಸಿದ್ದರು. 50 ನಿಮಿಷಗಳಲ್ಲಿ 575 ಮೆಟ್ಟಿಲುಗಳನ್ನು ಹತ್ತಿರುವ ಹನುಮಂತಪ್ಪ ಅಚ್ಚರಿ ಮೂಡಿಸಿದ್ದಾರೆ.