ಕ್ರೈಂರಾಷ್ಟ್ರೀಯ

ಕಾರ್ಯಕ್ರಮವೊಂದರಲ್ಲಿ ಪಿಸ್ತೂಲ್ ಹಿಡಿದುಕೊಂಡು ಕೇಕ್ ಕತ್ತರಿಸಿದ ಯುವಕ ಅರೆಸ್ಟ್



ಕಾರ್ಯಕ್ರಮವೊಂದರಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಯುವಕನೊಬ್ಬ ಕೇಕ್ ಕತ್ತರಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.



ಬಂಧಿತ ಯುವಕನನ್ನು ದೆಹಲಿ ಸಂಗಮ್ ವಿಹಾರ್ ಮೂಲದ ಅನಿಕೇತ್ ಅಲಿಯಾಸ್ ಅನೀಶ್ ಎಂದು ಗುರುತಿಸಲಾಗಿದೆ.

ಕೇಕ್ ಕತ್ತರಿಸುವ ಸಂದರ್ಭ ಯುವಕ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡಿದ್ದು ಇದನ್ನು ಆತನ ಜೊತೆಗಿದ್ದವರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಯುವಕನ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!