ಕರಾವಳಿ

ಕಲಿಕೆಗೆ ತೊಂದರೆಯಾದರೆ ನನಗೆ ಕರೆ ಮಾಡು…ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನಿಗೆ ಶಾಸಕ ಅಶೋಕ್ ರೈ ನೆರವಿನ ಭರವಸೆ

ಪುತ್ತೂರು:“ನೀನು ಸ್ಕೂಲ್‌ಗೆ ಹೋಗುವುದಿಲ್ವ? ಏನು  ಕಲಿಯುತ್ತಿದ್ದೀಯ? ಅಪ್ಪ ಅಮ್ಮ ಏನು ಕೆಲಸ ಮಾಡುತ್ತಾರೆ? ನೀನು ಯಾಕೆ ಈ ಕೆಲಸವನ್ನು ಮಾಡುತ್ತಿದ್ದಿಯ ?  ಮನೆಯಲ್ಲಿ ಕಷ್ಟ ಇದೆಯಾ? ಇದು ಉಡುಪಿಯಲ್ಲಿ  ಕಾರ್ಯಕ್ರಮವೊಂದಕ್ಕೆ ತೆರಳಿದ ಪುತ್ತೂರು ಶಾಸಕ ಅಶೋಕ್ ರೈ ಅವರು ಅಲ್ಲಿ ಪಾತ್ರೆಯನ್ನು ಶುಚಿ ಮಾಡುತ್ತಿದ್ದ ಬಾಲಕನಲ್ಲಿ  ಕೇಳಿದ ಪ್ರಶ್ನೆ.  ಅಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕ ಯಾರೆಂಬುದೇ ಶಾಸಕರಿಗೆ ಗೊತ್ತಿಲ್ಲ. ಊಟ ಮುಗಿಸಿ ಪ್ಲೇಟ್ ಇಡಲು  ಬಂದಾಗ ಬಾಲಕನ ಕೆಲಸವನ್ನು ಕಂಡು ಮರುಕಪಟ್ಟ  ಶಾಸಕರು ಈ ಚಿಕ್ಕ ಪ್ರಾಯದಲ್ಲಿ ಬಾಲಕ ಈ ಕೆಲಸ  ಮಾಡಬೇಕಾದರೆ ಏನೋ ಕಷ್ಟ ಇರಬಹುದು ಎಂದು  ಭಾವಿಸಿ ಅವನ  ಬಳಿ ಬಂದು ಮೊದಲಿಗೆ ತಲೆ ಸವರಿದರು. ಆ ಬಳಿಕ ಆತನಲ್ಲಿ ಅವನ ಮನೆಯವರ ಮಾಹಿತಿ ಪಡೆದುಕೊಂಡರು. ಆಗ ಬಾಲಕ ತಾನು ಪಿಯುಸಿ ಓದುತ್ತಿದ್ದೇನೆ, ಅಪ್ಪ ಸಾರಣೆ  ಕೆಲಸಕ್ಕೆ ಹೋಗುತ್ತಿದ್ದರು, ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ದಿನಂಪ್ರತಿ ಕೆಲಸಕ್ಕೆ ಹೋಗುತ್ತಿಲ್ಲ, ಅಮ್ಮ ಮನೆಯಲ್ಲೇ ಇರುವುದು. ನಾನು ಕ್ಯಾಟರಿಂಗ್ ಅವರ ಜೊತೆ ಕೆಲಸಕ್ಕೆ ಹೋಗುತ್ತೇನೆ ಆ ಹಣವನ್ನು ಕೂಡಿಟ್ಟು ಸ್ಕೂಲ್ ಫೀಸ್ ಕಟ್ಟುವುದಾಗಿ ಹೇಳಿದ. ಬಾಲಕನ ಕಷ್ಟ  ಕೇಳಿ ಭಾವುಕರಾದ ಶಾಸಕರು ನೀನು ವಿದ್ಯೆ  ಮುಂದುವರೆಸು ನಿನಗೆ ವಿದ್ಯಾಬ್ಯಾಸಕ್ಕೆ ಏನಾದರೂ ಕಷ್ಟವಾದರೆ ನನಗೆ ಕರೆ ಮಡು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಬಾಲಕನ ಜೊತೆ ಶಾಸಕರು  ಮಾತನಾಡುತ್ತಿದ್ದ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಶಾಸಕರ ಮಾನವೀಯತೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.

Read More
ರಾಜಕೀಯರಾಷ್ಟ್ರೀಯ

ರಾಯ್’ಬರೇಲಿಯಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆಗೆ ರಾಯ್ಬರೇಲಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇ.3ರಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ

Read More
ಕ್ರೈಂರಾಜ್ಯ

ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ: ಎರಡನೇ ಪ್ರಕರಣ ದಾಖಲು

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್. ಡಿ ರೇವಣ್ಣ ಅವರ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹಿಳೆ ಮೇಲೆ

Read More
ಕ್ರೀಡೆರಾಷ್ಟ್ರೀಯ

ಒಂಟಿ ರನ್ ಓಡದ ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಡೆ ಟೀಕೆಗೆ ಗುರಿಯಾಗಿದೆ. ಚೆನ್ನೈ ಇನ್ನಿಂಗ್ಸ್ ನ

Read More
ರಾಜ್ಯ

ಬೆಂಗಳೂರಿಗೆ ತಂಪೆರೆದ ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊನೆಗೂ ಮಳೆ ಬಂದಿದೆ. ಮೇ.2ರಂದು ಸಂಜೆ ತುಂತುರು ಮಳೆಯಾಗಿದ್ದು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನ  ನಿಟ್ಟುಸಿರು ಬಿಡುತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್, ವರ್ತೂರು, ವೈಟ್

Read More
ರಾಜಕೀಯರಾಷ್ಟ್ರೀಯ

ರಾಯ್ ಬರೇಲಿ ಹಾಗೂ ಕೈಸರ್ ಗಂಜ್ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಬಿಜೆಪಿ

ಉತ್ತರ ಪ್ರದೇಶದ ಕೈಸರ್ ಗಂಜ್ ಲೋಕಸಭಾ ಕ್ಷೇತ್ರ ಹಾಗೂ ರಾಯ್ ಬರೇಲಿಯಿಂದ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಬ್ರಿಜ್

Read More
ರಾಷ್ಟ್ರೀಯ

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಧಾನಿ ಮೋದಿ ಮೌನದ ವಿರುದ್ದ ಕಿಡಿಕಾರಿದ ರಾಹುಲ್ ಗಾಂಧಿ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಪ್ರಜ್ವಲ್‌ ರೇವಣ್ಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌

Read More
ಕರಾವಳಿ

ಯೂಸುಫ್ ಗೌಸಿಯಾ ಸಾಜ ಅವರಿಗೆ ಸಾರ್ಯ ಅಲ್ ಅಮಲ್ ಜುಮಾ ಮಸೀದಿಯಲ್ಲಿ ಸನ್ಮಾನ

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾರ್ಯ ಅಲ್ ಅಮಲ್ ಜುಮಾ ಮಸೀದಿಯ ಅಧ್ಯಕ್ಷರೂ ಆದ ಯೂಸುಫ್ ಗೌಸಿಯಾ ಸಾಜ ಅವರನ್ನು

Read More
ರಾಜ್ಯ

ಹುಬ್ಬಳ್ಳಿ: ನೇಹಾ ಕುಟುಂಬದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಅವರ ಹತ್ಯೆಯ ಕುರಿತು ಮೇ.1ರಂದು ನೇಹಾ ಕುಟುಂಬದವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾದರು. ಆರೋಪಿಗೆ ಶೀಘ್ರದಲ್ಲೇ

Read More
ಜಿಲ್ಲೆರಾಜಕೀಯ

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪರ ಪುತ್ತೂರು ಶಾಸಕ ಅಶೋಕ್ ರೈ ಪ್ರಚಾರ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆಜರಿ ಗೋವೆಹಾಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಪರ ಪ್ರಚಾರ ಕಾರ್ಯದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್

Read More
error: Content is protected !!