Author: news_bites_admin

ಕ್ರೈಂಜಿಲ್ಲೆ

ಕೆಯ್ಯೂರು, ಕಟ್ಟತ್ತಾರು ಪರಿಸರದಲ್ಲಿ ನಡೆದ ಕಳ್ಳತನ ಪ್ರಕರಣ: ಆರೋಪಿ ಬಂಧನ

ಪುತ್ತೂರು: ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ೨೦೨೧ನೇ ಜುಲೈ ತಿಂಗಳಿನಲ್ಲಿ ಕೆಯ್ಯೂರು ಗ್ರಾಮದ ಕಟ್ಟತ್ತಾರು, ಕೆಯ್ಯೂರು, ಮಾಡಾವು ಪರಿಸರದಲ್ಲಿ ಸರಣಿ ಮನೆ ಕಳ್ಳತನ ನಡೆದಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು, ಸದ್ರಿ ಕಳ್ಳತನ ಪ್ರಕರಣವನ್ನು ಭೇದಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ.ಎಂ.ವೈ ಮತ್ತು ರಾಮಕೃಷ್ಣರವರ ನೇತೃತ್ವದ ತಂಡ ಆರೋಪಿ ಕೇರಳ ರಾಜ್ಯದ ಕೊಲ್ಲಂ ಕುಟ್ಟಿಪರಂಬ್ ಪರಂಬಿಲ್ ನಿವಾಸಿ ಮಹಮ್ಮದ್.ಕೆ.ಯು (೪೨ ವ) ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ ಸಮಯ ಆರೋಪಿಯು ಕಳೆದ ವರ್ಷ ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಹಾಗೂ ಬೆಳಂದೂರಿನ ಪಳ್ಳತ್ತಾರು ಪರಸರಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈತನಿಂದ ಸುಮಾರು ೨,೫೦,೦೦೦ /- ರೂ ಮೌಲ್ಯದ ಚಿನ್ನಾಭರಣ ಹಾಗೂ ಕಳವುಗೈದ ಮೋಟಾರು ಸೈಕಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಈತನು ಕೊಣಾಜೆ, ವಿಟ್ಲ, ಬಂಟ್ವಾಳ, ಪುಂಜಾಲಕಟ್ಟೆ ಪರಸರಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈತನ ವಿರುದ್ಧ ಈಗಾಗಲೇ ಕೇರಳ ರಾಜ್ಯದಲ್ಲಿ ೧೨೦ ಕ್ಕಿಂತಲೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಪುತ್ತೂರು, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ.ವೀರಯ್ಯ ಹಿರೇಮಠ, ಡಿ.ಸಿ.ಆರ್.ಬಿ ಪೊಲೀಸ್ ಉಪಾಧೀಕ್ಷಕ ಡಾ: ಗಾನ ಪಿ ಕುಮಾರ್ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ.ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ ಎಂ.ವೈ ಮತ್ತು ರಾಮಕ್ಕಷ್ಣ ,ಸಿಬ್ಬಂದಿಗಳಾದ ಪ್ರೊ. ಪಿಎಸ್‌ಐ ಗಳಾದ ಕಾರ್ತಿಕ್ ಮತ್ತು ಭವಾನಿ, ಎಎಸ್‌ಐ ಮುರುಗೇಶ್, ಹೆಚ್.ಸಿಗಳಾದ ವರ್ಗೀಸ್, ದೇವರಾಜ್, ಅದ್ರಾಮ್, ಪ್ರವೀಣ್ ರೈ, ಪ್ರಶಾಂತ್, ಸ್ಕರಿಯ, ಪ್ರಶಾಂತ್ ರೈ, ಪಿಸಿ ಹರ್ಷಿತ್‌ರವರು ಸಹಕರಿಸಿದ್ದರು.

Read More
ಕರಾವಳಿ

ಮಂಗಳೂರು: ಬಸ್ ಚಾಲಕನ ಧಾವಂತಕ್ಕೆ ಎಂಟನೇ ತರಗತಿ ವಿದ್ಯಾರ್ಥಿ ಬಲಿ

ಮಂಗಳೂರು: ಖಾಸಗಿ ಬಸ್ ಚಾಲಕನ ಅತಿ ವೇಗ ಮತ್ತು ಧಾವಂತದ ಚಾಲನೆಗೆ ಎಂಟನೇ ತರಗತಿಯ ವಿದ್ಯಾರ್ಥಿ ನಡು ರಸ್ತೆಯಲ್ಲಿ ದುರಂತವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್

Read More
ಜಿಲ್ಲೆ

ಮಳಲಿ ಮಸೀದಿ ವಿವಾದ ; ಮತ್ತೆ ತೀರ್ಪು ಮುಂದೂಡಿದ ಕೋರ್ಟ್

ಮಂಗಳೂರು: ಗುರುಪುರದ ಮಳಲಿ ಜುಮ್ಮಾ ಮಸೀದಿಯ ಕುರಿತ ವಿವಾದಕ್ಕೆ ಸಂಬಂಧಿಸಿ ಮಂಗಳೂರಿನ ಸಿವಿಲ್ ಕೋರ್ಟ್ ಮತ್ತೆ ತೀರ್ಪು ಮುಂದೂಡಿದೆ. ನವೆಂಬರ್ 9ಕ್ಕೆ ತೀರ್ಪು ನೀಡುವುದಾಗಿ ಇಂದು ನ್ಯಾಯಾಧೀಶರು

Read More
ಕರಾವಳಿಜಿಲ್ಲೆ

ಸುರತ್ಕಲ್ ಟೋಲ್’ಗೇಟ್ ಹೋರಾಟ: ಕಾನೂನು ಕೈಗೆತ್ತಿಕೊಂಡರೆ ಸರಕಾರ ಕ್ರಮ ಕೈಗೊಳ್ಳುತ್ತದೆ – ನಳಿನ್ ಕುಮಾರ್ ಕಟೀಲ್

ಮಂಗಳೂರು: ಸುರತ್ಕಲ್ ಟೋಲ್ ವಿರುದ್ದ ಹೋರಾಟ ತೀವ್ರಗೊಂಡಿದ್ದು ಇದೀಗ ಸಂಸದ ನಳಿನ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ ಹೋರಾಟಗಾರರಿಗೆ 20 ದಿವಸದ ಕಾಲವಕಾಶ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಹೋರಾಟಕ್ಕೆ ನನ್ನ

Read More
ಕ್ರೈಂಜಿಲ್ಲೆ

ಮಠದ ಗೇಟಿಗೆ ನೇಣು ಬಿಗಿದುಕೊಂಡು ವ್ಯಕ್ತಿ‌ ಆತ್ಮಹತ್ಯೆ..!

ಸಿದ್ಧಾರೂಢ ಮಠದ ಗೇಟಿಗೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಖಂಡೆರಾಯನಹಳ್ಳಿ ತಾಂಡಾದಲ್ಲಿ ಘಟನೆ ನಡೆದಿದ್ದುಮಂಜಪ್ಪ ಲಮಾಣಿ (50) ಮೃತ

Read More
ಜಿಲ್ಲೆರಾಜ್ಯ

ಬಿಜೆಪಿ ಸರಕಾರ ಪೊಲೀಸರಿಗೆ ಬೇಕಾಬಿಟ್ಟಿ ಅಧಿಕಾರ ನೀಡಿದೆಯೇ?
ಗೃಹ ಸಚಿವರು ರಾಜೀನಾಮೆ ನೀಡುವುದೇ ಸೂಕ್ತ:  ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಪ್ರತಿಭಾ ಕುಳಾಯಿವರು ವಿದ್ಯಾವಂತ ಮಹಿಳೆ, ಕಣ್ಣೆದುರು ಯಾವುದೇ ಅನ್ಯಾಯ ನಡೆದರೂ ಅದನ್ನು ಪ್ರತಿಭಟಿಸುವ ಮನೋಭಾವ ಇವರದ್ದು, ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಇವರ ಮನೆಗೆ ತಡ

Read More
ಜಿಲ್ಲೆ

ಸುಳ್ಯ :ಶಾಂತಿನಗರ ಮದರಸದಲ್ಲಿ ಸಂಭ್ರಮದ ಮೀಲಾದ ಫೆಸ್ಟ್ ಮತ್ತು ಮಕ್ಕಳ ಪ್ರತಿಭಾ ಸಂಗಮ

ಸುಳ್ಯ :ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ರಿ ನೂರುಲ್ ಇಸ್ಲಾಂ ಮದರಸ ಶಾಂತಿನಗರ ಇದರ ಆಶ್ರಯದಲ್ಲಿ ಮೀಲಾದ್ ಫೆಸ್ಟ್ 2022 ಇದರ ಅಂಗವಾಗಿ ಮೌಲಿದ್ ಪಾರಾಯಣ ಮತ್ತು ಮಕ್ಕಳ

Read More
ರಾಜಕೀಯರಾಷ್ಟ್ರೀಯ

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ರಾಹುಲ್ ಗಾಂಧಿ

ಬಳ್ಳಾರಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯುತ್ತಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಕಣದಲ್ಲಿದ್ದಾರೆ. ‘ಭಾರತ್ ಜೋಡೊ ಯಾತ್ರೆ’

Read More
ರಾಷ್ಟ್ರೀಯ

ಬ್ರಿಟನ್‌ ಪ್ರಧಾನಿಯಾಗುತ್ತಾರಾ ಭಾರತ ಮೂಲದ ರಿಷಿ ಸುನಾಕ್

ಲಂಡನ್‌: ಭಾರತ ಮೂಲದ ರಿಷಿ ಸುನಾಕ್ ಬ್ರಿಟನ್‌ ಪ್ರಧಾನಿಯಾಗುತ್ತಾರಾ..? ಹೀಗೊಂದು ಪ್ರಶ್ನೆ ಎದ್ದಿದೆ. ಅಧಿಕಾರಕ್ಕೆ ಏರಿದ ಕೆಲ ದಿನದಲ್ಲೇ ತಮ್ಮ ಪಕ್ಷದ ಸಂಸದರ ವಿಶ್ವಾಸವನ್ನು ಕಳೆದುಕೊಂಡಿರುವ ಬ್ರಿಟನ್

Read More
ರಾಷ್ಟ್ರೀಯ

ಕೇಸರಿ ಭದ್ರಕೋಟೆ ಉಳಿಸಿಕೊಳ್ಳಲು ಬಿಜೆಪಿ ಯತ್ನ | ಮೋದಿ, ಅಮಿತ್ ಶಾ ಮುಂದಾಳತ್ವದ ಫ್ಯ್ಲಾನ್ ಹೇಗಿದೆ?

ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಶೀಘ್ರದಲ್ಲೇ ಗುಜರಾತ್‌ ವಿಧಾನಸಭೆಗೂ ಚುನಾವಣೆ ಘೋಷಣೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ನಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ

Read More
error: Content is protected !!