Author: news_bites_admin

ಕರಾವಳಿರಾಜಕೀಯ

ಚುನಾವಣೆ ಸಂದರ್ಭದಲ್ಲಿ ನನ್ನ ಜೊತೆಯಲ್ಲೇ ಇದ್ದು ಬ್ಯಾಟ್ ಬೀಸಿದವರು ಯಾರೆಂದು ನನಗೆ ಗೊತ್ತಿದೆ- ಶಾಸಕ ಅಶೋಕ್ ರೈ

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾಡಿರುವ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ‘ನಾನು ಚುನಾವಣೆಯಲ್ಲಿ ಗೆದ್ದು ಶಾಸಕನಾದ ಬಳಿಕ ಹಲವರು ನನ್ನ ಬಳಿಗೆ ಬಂದು ಅಶೋಕಣ್ಣ ನಿಮ್ಮ ಪರ ನಾವು ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅದರಲ್ಲಿ ಕೆಲವರು ಚುನಾವಣೆ ಮುಗಿಯುವ ತನಕವೂ ಬ್ಯಾಟಿನದ್ದೇ ಡಿಪಿ ಹಾಕಿದ್ದರು. ಚುನಾವಣೆ ವೇಳೆ ಬ್ಯಾಟ್‌ನ ಡಿಪಿ ಹಾಕಿದವರ ಸ್ಕ್ರೀನ್ ಶಾಟ್ ನನ್ನ ಬಳಿ ಇದೆ. ನನ್ನ ಜೊತೆಯಲ್ಲೇ ಇದ್ದು ಬ್ಯಾಟ್ ಬೀಸಿದವರು ಯಾರೆಂದು ನನಗೆ ಗೊತ್ತಿದೆ. ಯಾರೆಲ್ಲಾ ಪಕ್ಷಕ್ಕೆ ವಿರುದ್ದವಾಗಿ ಮತ ಹಾಕಿದ್ದಾರೆಂದೂ ಗೊತ್ತಿದೆ. ಆದರೆ ನಾನು ಗೆದ್ದ ಬಳಿಕ ಯಾರನ್ನೂ ದೂರ ಮಾಡಿಲ್ಲ, ಎಲ್ಲರನ್ನೂ ಹತ್ತಿರ ಮಾಡಿಕೊಂಡಿದ್ದೇನೆ, ಬ್ಯಾಟ್ ಬೀಸಿದವರು, ಬಿಜೆಪಿಯವರು ಈಗ ನನ್ನ ಬಳಿಗೆ ಬಂದು ಅವರ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದರು. ಶಾಸಕರು ಆಡಿರುವ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಅಶೋಕ್ ರೈ ಅವರ ಜೊತೆಗಿದ್ದುಕೊಂಡೇ ವಿರುದ್ಧವಾಗಿ ಕೆಲಸ ಮಾಡಿದವರು ಯಾರು..? ಎದುರಿಗೆ ಅಶೋಕ್ ರೈಯವರಿಗೆ ಸಪೋರ್ಟ್ ಮಾಡುವವರಂತೆ ನಟಿಸಿ ಒಳಗಿಂದೊಳಗೆ ಬ್ಯಾಟ್ ಬೀಸಿದವರು ಯಾರು..? ಅಂತವರಿಗೆ ಪಕ್ಷದಲ್ಲಿರಲು ನೈತಿಕತೆ ಇದೆಯೇ ಎನ್ನುವ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಶಾಸಕರು ಆಡಿರುವ ಮಾತು ಪುತ್ತೂರು ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಠಿಸಿದೆ.

Read More
ಕರಾವಳಿ

ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ದೀಪಾವಳಿ ಧಮಾಕಾ ಆಫರ್ ಪ್ರಾರಂಭ

ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ದೀಪಾವಳಿ ಧಮಾಕಾ ಆಫರ್ ಪ್ರಕಟಿಸಲಾಗಿದೆ. ಅ.1ರಂದು ಆಫರ್ ಪ್ರಾರಂಭಗೊಂಡಿದ್ದು ನ.15ರಂದು ಆಫರ್ ಮುಕ್ತಾಯಗೊಳ್ಳಲಿದೆ. ಫ್ಯಾಕ್ಟರಿ ಬೆಲೆಯಲ್ಲಿ ನೇರವಾಗಿ ಫರ್ನಿಚರ್ ಐಟಂಗಳನ್ನು ಮಾರಾಟ ಮಾಡುವ ಹೆಸರಾಂತ ಮಳಿಗೆಯಾಗಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ವಿವಿಧ ವಿನ್ಯಾಸಗಳ ಆಧುನಿಕ ಶೈಲಿಯ ಫರ್ನಿಚರ್‌ಗಳ ಬೃಹತ್ ಸಂಗ್ರಹ ಲಭ್ಯವಿದ್ದು ವಿವಿಧ ಫರ್ನಿಚರ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.  ಇಎಂಐ ಮೂಲಕ ಕನಿಷ್ಠ ದರ ಪಾವತಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಲ್ಲದೇ ಡಿ.ಜಿ ಫರ್ನಿಚರ್ ಮಳಿಗೆಗೆ ಭೇಟಿ ನೀಡಿದವರಿಗೆ ಅದೃಷ್ಟ ಬಹುಮಾನವಾಗಿ ಚಿನ್ನದ ನಾಣ್ಯ ಪಡೆಯಲು ಅವಕಾಶವಿದೆ. ಆಫರ್ ದರವನ್ನು ಈ ಕೆಳಗಿನ 👇 ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ. ಆಫರ್ ದರದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಡಿ.ಜಿ ಫರ್ನಿಚರ್‌ನ ಮಾಲಕರು ವಿನಂತಿಸಿದ್ದಾರೆ.

Read More
ಅಂತಾರಾಷ್ಟ್ರೀಯ

KCF ಒಮಾನ್ ರಬೀಅ್ 23 ಬೃಹತ್ ಮೀಲಾದ್ ಸಮಾವೇಶ

ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ವತಿಯಿಂದ ‘ಜಗತ್ತಿಗೆ ಕರುಣೆಯ ಪ್ರವಾದಿ’ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಮೀಲಾದ್ ಸಮಾವೇಶವು ದಿನಾಂಕ ಸೆ.29 ಶುಕ್ರವಾರ ಅಲ್ ಫಾಮ್ ಬಾಲ್ರೂಮ್,

Read More
ಕರಾವಳಿ

ವಿಟ್ಲ: ಮಾರ್ಬಲ್‌ ಸಾಗಾಟದ ಲಾರಿ ಪಲ್ಟಿ: ನಾಲ್ಕು ಮಂದಿ ಗಂಭೀರ

ವಿಟ್ಲ: ಮಾರ್ಬಲ್‌ ತುಂಬಿಕೊಂಡು ಬಂದ ಲಾರಿ ಪಲ್ಟಿಯಾಗಿ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ನಡೆದಿದೆ. ಲಾರಿ ಪಲ್ಟಿಯಾಗಿ

Read More
ಕರಾವಳಿ

ಸೂರಿಕುಮೇರು: ಪಿಕಪ್ ಪಲ್ಟಿ

ವಿಟ್ಲ: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಸೂರಿಕುಮೇರಿನಲ್ಲಿ ಬಾಳೆಹಣ್ಣು ಸಾಗಾಟದ ಪಿಕಪ್ ವಾಹನ ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯ ಮೇಲೆ ನಿಂತ

Read More
ಕ್ರೈಂರಾಷ್ಟ್ರೀಯ

ಟ್ರಕ್‌ಗೆ ಡಿಕ್ಕಿ ಹೊಡೆದ ಕಾರು: ಎಂಟು ಮಂದಿ ದಾರುಣ ಸಾವು

ಕಾರೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ಘಟನೆಉತ್ತರ ಪ್ರದೇಶದ ವಾರಾಣಸಿಯಲ್ಲಿ ಅ. 4ರಂದು ಮುಂಜಾನೆ ನಡೆದಿದೆ. ವಾರಾಣಸಿ-ಲಖನೌ ಹೆದ್ದಾರಿಯಲ್ಲಿ ಬನಾರಸ್‌ನಿಂದ ಪಿಲಿಭಿತ್ ಕಡೆಗೆ

Read More
ಕರಾವಳಿರಾಜಕೀಯರಾಜ್ಯ

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಶಾಬು ಸಾಹೇಬ್ ಪಾಲ್ತಾಡ್ ನೇಮಕ

ಪುತ್ತೂರು: ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಪಿ ಶಾಬು ಸಾಹೇಬ್ ಪಾಲ್ತಾಡ್ ನೇಮಕಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ಆದೇಶದ ಮೇರೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಸ್ಪೀಕರ್ ಯು.ಟಿ ಖಾದರ್, ಮಾಜಿ ಸಚಿವ ರಮಾನಾಥ ರೈ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮೊದಲಾದವರ ಶಿಫಾರಸ್ಸಿನ ಮೇರೆಗೆ  ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸ್ವಾಮಿ ಗೌಡರವರು ಪಿ ಶಾಬು ಸಾಹೇಬ್ ಪಾಲ್ತಾಡ್ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ  ನೇಮಕ ಮಾಡಿದ್ದಾರೆ. ಶಾಬು ಸಾಹೇಬ್‌ರವರು ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಧ್ಯಾಕ್ಷರಾಗಿ, ಕೆ.ಪಿ.ಸಿ.ಸಿ ಸೇವಾದಳದ ಸದಸ್ಯರಾಗಿ, ಕೆ.ಪಿ.ಸಿ.ಸಿ ಅಲ್ಪಸಂಖ್ಯಾತರ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಶಾಬು ಸಾಹೇಬ್‌ರವರು ಸಂಗ ಸಂಸ್ಥೆಗಳಲ್ಲೂ ತೊಡಗಿಸಿಕೊಂಡಿದ್ದರು. 

Read More
ಕರಾವಳಿ

ದುಬೈ ನ್ಯೂ ಬುರ್ಖಾ ಪ್ಯಾಲೇಸ್‌ನಲ್ಲಿ ಬೃಹತ್ ಡಿಸ್ಕೌಂಟ್ ಆಫರ್

ಪುತ್ತೂರು: ಕಲ್ಲಾರೆಯಲ್ಲಿ ಕಾರ್ಯಾಚರಿಸುತ್ತಿರುವ ದುಬೈ ನ್ಯೂ ಬುರ್ಖಾ ಪ್ಯಾಲೇಸ್ ಸೀಮಿತ ಅವಧಿಯ ಆಫರ್ ಪ್ರಕಟಿಸಿದ್ದು ವಿವಿಧ ಮಾದರಿಯ ಬುರ್ಖಾಗಳ ಮೇಲೆ ಬೃಹತ್ ರಿಯಾಯಿತಿ ದರ ಪ್ರಕಟಿಸಲಾಗಿದೆ. ಸ್ಟೂಡೆಂಟ್ ಬುರ್ಖಾ, ವೆಡ್ಡಿಂಗ್ ಬುರ್ಖಾ, ಹ್ಯಾಂಡ್ ವರ್ಕ್ ಬುರ್ಖಾ, ನಾರ್ಮಲ್ ಬುರ್ಖಾ, ಪ್ರಿಲ್ ಬುರ್ಖಾ ಸೇರಿದಂತೆ ಆಧುನಿಕ ಶೈಲಿಯ ವಿವಿಧ ವಿನ್ಯಾಸಗಳ ಬುರ್ಖಾಗಳು ಮಳಿಗೆಯಲ್ಲಿ ಲಭ್ಯವಿದೆ. ಆಫರ್ ಪ್ರಯುಕ್ತ ಪ್ರತೀ ಬುರ್ಖಾಗಳ ಮೇಲೆ 20% ದಿಂದ 50% ವರೆಗೆ ರಿಯಾಯಿತಿ ದರ ಪ್ರಕಟಿಸಲಾಗಿದೆ. ಅ.2ರಂದು ಆಫರ್ ಪ್ರಾರಂಭಗೊಂಡಿದ್ದು ಅ.12ಕ್ಕೆ ಆಫರ್ ಕೊನೆಗೊಳ್ಳಲಿದೆ.  ಗ್ರಾಹಕರು ಸೀಮಿತ ಅವಧಿಯ ಆಫರ್‌ನ್ನು ಸದುಪಯೋಗಪಡಿಸಿಕೊಳ್ಳುವಂತೆ ದುಬೈ ಬುರ್ಖಾ ಮಳಿಗೆಯ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ:9686897871, 9108123500 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Read More
ಕರಾವಳಿ

ರೈ ಚಾರಿಟೇಬಲ್ ಟ್ರಸ್ಟ್
ಕಾರ್ಯಾಧ್ಯಕ್ಷರಾಗಿ ಸುದೇಶ್ ಶೆಟ್ಟಿ ನೇಮಕ

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸುದೇಶ್ ಶೆಟ್ಟಿ ಶಾಂತಿನಗರ ರವರು ನೇಮಕಗೊಂಡಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿರುವ ಶಾಸಕರಾದ ಅಶೋಕ್

Read More
ಕರಾವಳಿ

ಕುಂಬ್ರ: ಇತ್ತೀಚೆಗೆ ನಿಧನರಾದ ಐತಪ್ಪ ಪೂಜಾರಿ ಮನೆಗೆ ಶಾಸಕ ಅಶೋಕ್ ರೈ ಭೇಟಿ- ಸಾಂತ್ವನ

ಪುತ್ತೂರು: ಇತ್ತೀಚೆಗೆ ನಿಧನರಾದ ಒಳಮೊಗ್ರು ಗ್ರಾಮದ ನಾಣಿಲ್ತಡ್ಕ ನಿವಾಸಿ ಐತಪ್ಪ ಪೂಜಾರಿಯವರ ಮನೆಗೆ ಶಾಸಕರಾದ ಅಶೋಕ್ ರೈ ಯವರು ಭೇಟಿ ನೀಡಿದರು. ಕೂಲಿ ಕಾರ್ಮಿಕರಾಗಿದ್ದ ಐತಪ್ಪ ಪೂಜಾರಿಯವರು

Read More
error: Content is protected !!