ವಿವೇಕಾನಂದ ಕಾಲೇಜಿನಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಹಸನ ಪ್ರಕರಣ: ಮುಸ್ಲಿಂ ಯುವಜನ ಪರಿಷತ್ ನಿಯೋಗದಿಂದ ಡಿವೈಎಸ್ಪಿ ಭೇಟಿ, ಕಾನೂನು ಕ್ರಮಕ್ಕೆ ಆಗ್ರಹ
ಪುತ್ತೂರು: ನಗರದ ವಿವೇಕಾನಂದ ಕಾಲೇಜ್ ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಕೃತ್ಯವನ್ನು ವಿಧ್ಯಾರ್ಥಿಗಳ ಮೂಲಕ ಮಾಡಿಸಿದ ಶಾಲಾಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಮುಸ್ಲಿಂ ಯುವಜನ ಪರಿಷತ್ತು ಅಧ್ಯಕ್ಷ ಹಾಜಿ ಅಶ್ರಫ್ ಕಲ್ಲೇಗ ನೇತ್ರತ್ವದ ನಿಯೋಗವೂ ಪುತ್ತೂರು ಪೋಲಿಸ್ ಉಪವರಿಷ್ಠಾಧಿಕಾರಿ ಗಾನ ಕುಮಾರ್ ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನವಿ ಸಲ್ಲಿಸಿತು.

ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನಿಯೋಗಕ್ಕೆಗಾನ ಕುಮಾರ್ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮುಸ್ಲಿಂ ಯುವಜನ ಪರಿಷತ್ತಿನ ಪದಾಧಿಕಾರಿಗಳಾದ ಹಾಜಿ ಇಬ್ರಾಹಿಂ ಸಾಗರ್, ಹಮೀದ್ ಸಾಲ್ಮರ, ಖಾಸಿಂ ಹಾಜಿ ಹಾಗೂ ಅಶ್ರಫ್ ಮುರ ಉಪಸ್ಥಿತರಿದ್ದರು.