ನಾನು ಯಾವುದೇ ಅಧಿಕಾರಿಯಿಂದ ಒಂದು ಪೈಸೆ ಕೇಳುವುದಿಲ್ಲ-ಅಶೋಕ್ ರೈ
ಪುತ್ತೂರು: ನಾನು ಯಾವುದೇ ಅಧಿಕಾರಿಯಿಂದ ಒಂದು ಪೈಸೆ ಕೇಳುವುದಿಲ್ಲ. ಯಾರಾದರೂ ಅಧಿಕಾರಿಗಳು ದುಡ್ಡು ಕೊಟ್ಟು ಇಲ್ಲಿಗೆ ಬಂದಲ್ಲಿ, ನನ್ನ ಗಮನಕ್ಕೆ ಬಂದರೆ ಒಂದು ವಾರದಲ್ಲಿ ಅಂತವರನ್ನು ಇಲ್ಲಿಂದ ಕಳುಹಿಸಿ ಕೊಡುವ ಕೆಲಸ ಮಾಡುತ್ತೇನೆ. ಯಾವ ಅಧಿಕಾರಿಯಿಂದಲೂ ನಾನು ದುಡ್ಡು ಮಟ್ಟುವುದಿಲ್ಲ. ಚುನಾವಣೆ ಸಂದರ್ಭದಲ್ಲೂ ಒಂದು ರೂಪಾಯಿ ಯಾರಿಂದಲೂ ಕೇಳಿಲ್ಲ, ಆದ್ದರಿಂದ ಯಾವ ಅಧಿಕಾರಿ ಇಲ್ಲಿಗೆ ಬರುವುದಿದ್ದರೆ ಅವರಿಂದ ‘ಸೇವೆ’ ಮಾತ್ರ ನಾವು ಅಪೇಕ್ಷೆ ಮಾಡುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರಿನಲ್ಲಿ ಜೂ.3ರಂದು ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರಕ್ಕೆ ನಾನು ಕಡಿವಾಣ ಹಾಕಲು ಪ್ರಯತ್ನ ಮಾಡುತ್ತೇನೆ, ಭ್ರಷ್ಟಾಚಾರಕ್ಕೆ ನಮ್ಮ ಕ್ಷೇತ್ರದಲ್ಲಿ ಅವಕಾಶ ಇಲ್ಲ ಎಂದು ಅವರು ಹೇಳಿದರು. ಯುವಕರಿಗೆ ಉದ್ಯೋಗ ಕೊಡುವ ಪ್ರಯತ್ನ ಮಾಡುತ್ತೇವೆ. ಪ್ರತೀ ವರ್ಷ ಇಲ್ಲಿ ಉದ್ಯೋಗ ಮೇಳ ಮಾಡುತ್ತೇವೆ, ಯುವಕರನ್ನು ದಾರಿ ತಪ್ಪದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅಶೋಕ್ ರೈ ಹೇಳಿದರು.