ಸುಳ್ಯ ಕೋಲ್ಚಾರು ಸಮೀಪ ಸ್ಕೂಟರ್ ಮತ್ತು ಕಾರು
ಡಿಕ್ಕಿ; ಇಬ್ಬರಿಗೆ ಗಾಯ
ಸುಳ್ಯ ತಾಲೂಕು ಕೋಲ್ಚಾರು ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸವಾರಿಬ್ಬರು ಗಾಯ ಗೊಂಡ ಘಟನೆ ಫೆ.19ರಂದು
ವರದಿಯಾಗಿದೆ.

ಕೋಲ್ಚರಿನಿಂದ ಸುಳ್ಯ ಕಡೆ ಬರುತ್ತಿದ್ದ ಕಾರು, ಭಾಗದಿಂದ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಜತೀನ್ ಮತ್ತು ಸಹಸವಾರ ಮೋಹನ ಎಂಬವರು ಗಾಯಗೊಂಡಿದ್ದಾರೆ.

ಅದೇ ರಸ್ತೆಯಲ್ಲಿ ಬೊಲೆರೋ ವಾಹನದಲ್ಲಿ ಬರುತ್ತಿದ್ದ ಸತೀಶ್ ಎಂಬುವವರು ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆತಂದು ಸಹಕರಿಸಿದ್ದಾರೆ.