ಸಾಮಾಜಿಕ ಜಾಲ ತಾಣದಲ್ಲಿ ಯಾರನ್ನೂ ಕೀಳಾಗಿ ಚಿತ್ರೀಕರಿಸಬೇಡಿ- ಕಿವಿ ಮಾತು ಹೇಳಿದ ಶಾಸಕ ಅಶೋಕ್ ರೈ
ಪುತ್ತೂರು: ಸಾಮಾಜಿಕ ಜಾಲ ತಾಣದಲ್ಲಿ ಯಾರನ್ನೂ ಕೀಳಾಗಿ ಚಿತ್ರೀಕರಿಸಬೇಡಿ, ಸಾಧ್ಯವಾದರೆ ಅವರ ಬಗ್ಗೆ ಒಳ್ಳೆಯ ವಿಚಾರ ಹಾಕಿ. ಒಬ್ಬನ ಬಗ್ಗೆ ಕೀಳು ಮಟ್ಟದ ಬರೆದು ಏನು ಪ್ರಯೋಜನ? ಒಬ್ಬನನ್ನು ಹೊಗಳಿ, ಇನ್ನೊಬ್ಬನನ್ನು ತೆಗಳಿ ಬರೆದರೆ ಹೊಗಳಿದವ ನಿಮ್ಮ ಹತ್ತಿರ ಆಗ್ತಾನಾ? ಅವರು ಮತ್ತೆ ಒಂದೇ ಆಗ್ತಾರೆ, ಹಾಗೆಲ್ಲಾ ಮಾಡಬೇಡಿ, ಪಕ್ಷದ ಗೌರ ಹೆಚ್ಚಿಸಿ ಎಂದು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಪುತ್ತೂರಿನಲ್ಲಿ ಜೂ.3ರಂದು ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡದರು.
ಯಾರಿಗೂ ನೋವು ಕೆಲಸಕ್ಕೆ ಕಾರ್ಯಕರ್ತರು ಯಾರೂ ಹೋಗಬೇಡಿ, ಯಾರನ್ನೂ ಕೇವಲವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ, ಒಳ್ಳೆಯದನ್ನು ಮಾತ್ರ ನಾವು ಹಾಕುವ ಎಂದು ಅವರು ಕಿವಿಮಾತು ಹೇಳಿದರು.





