ಮನೆ ಕಟ್ಟುವ ವಿಚಾರ ಪ್ರಸ್ತಾಪಿಸಿ ಸ್ಪಷ್ಟನೆ ನೀಡಿದ ಅಶೋಕ್ ಕುಮಾರ್ ರೈ
ಪುತ್ತೂರಿನಲ್ಲಿ ಇಂದು(ಜೂ.3ರಂದು)ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಅದರ ಪೈಕಿ ತಾವು ನೂತನವಾಗಿ ಕಟ್ಟುತ್ತಿರುವ ಮನೆಯ ಬಗ್ಗೆ ಪ್ರಸ್ತಾಪಿಸಿ ಗಮನ ಸೆಳೆದರು. ಅಶೋಕ್ ರೈಯವರು ತಮ್ಮ ಮನೆಯ ಬಗ್ಗೆ ಸಭೆಯ ಆಡಿತ ಮಾತು ಇಲ್ಲಿದೆ…

ನಾನು ಒಂದು ಮನೆ ಕಟ್ಟುತ್ತಿದ್ದೇನೆ, ಸ್ವಲ್ಪ ದೊಡ್ಡ ಮನೆ, ಮನೆ ಕಟ್ಟಲು ಶುರು ಮಾಡಿ ಎರಡು ವರ್ಷ ಆಯಿತು. ಅದು ಪೂರ್ತಿಯಾಗಬೇಕಾದ್ರೆ ಇನ್ನೂ ಒಂದು ವರ್ಷ ಬೇಕು. ನಾನು ವಾಟ್ಸಾಪ್ಗೆ, ವಾಟ್ಸಾಪ್ ಗ್ರೂಪ್ಗೆ ಹೆದರಿ ಈ ವಿಚಾರ ನಾನು ನಿಮ್ಮತ್ರ ಹೇಳುತ್ತಿದ್ದೇನೆ. ಇನ್ನು ಒಂದೂವರೆ ವರ್ಷ ಆಗುವಾಗ ನನ್ನ ಮನೆ ಗೃಹ ಪ್ರವೇಶ ಆಗ್ತದೆ. ಆಗ ಅಶೋಕ್ ರೈ ಎಂಎಲ್ಎ ಆಗಿ ಒಂದು ವರ್ಷದಲ್ಲೇ ನೂರು ಕೋಟಿಯ ಮನೆ, ಬಂಗಲೆ ಕಟ್ಟಿದರು ಅಂತ ಪ್ರಚಾರ ಆಗ್ತದೆ. ಅದಕ್ಕೆ ನಾನು ಈಗಲೇ ಹೇಳುತ್ತಿದ್ದೇನೆ, ನಾನು ಜಾಗ ತೆಗೆದು ನಾಲ್ಕು ವರ್ಷ ಆಯಿತು. ಮನೆ ಕಟ್ಟಲು ಶುರು ಮಾಡಿ ಒಂದೂವರೆ ವರ್ಷ ಆಯಿತು. ಹಾಗಾಗಿ ದಯಮಾಡಿ ತಪ್ಪು ತಿಳ್ಕೊಬೇಡಿ, ಅಶೋಕ್ ರೈ ಎಂಎಲ್ಎ ಆಗಿ ಮನೆ ಕಟ್ಟಿದ್ದಲ್ಲ, ಸ್ವಂತ ಉದ್ಯಮದಿಂದ ಸಂಪಾದಿಸಿ ಮನೆ ಕಟ್ಟಿದ್ದು ಎಂದು ತಿಳಿದಿರಲಿ. ಗೃಹಪ್ರವೇಶಕ್ಕೆ ನಿಮ್ಮನ್ನೆಲ್ಲ ಕರೆಯುತ್ತೇನೆ, ಆದ್ರೆ ವಿಚಾರವನ್ನು ಈಗಲೇ ಮಂಡನೆ ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.