ಕರಾವಳಿರಾಜಕೀಯ

ಅಧಿಕಾರಕ್ಕಾಗಿ, ಹಣ ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ; ಜನ ಸೇವೆಯೇ ನನ್ನ ಗುರಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ

ಪುತ್ತೂರು: ಕೆದಿಲ ಅಧಿಕಾರಕಾಗಿ ಅಥವಾ ಹಣ ಗಳಿಸುವುದಕ್ಕಾಗಿ ನಾನು ರಾಜಕೀಯಕ್ಕೆ ಬಂದಿಲ್ಲ, ಜನ ಸೇವೆ ನನ್ನ ಗುರಿ, ಎಂದು ಗಡಿಯಾರದಲ್ಲಿ ನಡೆದ ಕೆದಿಲ ವಲಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.

ಕೆಪಿಸಿಸಿ ಸಂಯೋಜಕ ಕಾವು ಹೆಮ್ಮನಾಥ್ ಶೆಟ್ಟಿ ಮಾತನಾಡಿ ನಾವು ಕಾಂಗ್ರೆಸಿಗರು ಜಾತ್ಯತೀತರು, ಎಲ್ಲರನ್ನೂ ಸಮಾನವಾಗಿ ಕಾಣುವರು ಎಂದು ಹೇಳಿದರು.

ಕೊಡುಗೈ ದಾನಿಯಾದ ಅಶೋಕ್ ಕುಮಾರ್ ರೈ ರವರನ್ನು ಶಾಸಕರಾಗಿ ಆಯ್ಕೆ ಮಾಡುವಂತೆ ಪುತ್ತೂರಿನ ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ ಹಾಗೂ ಎಂ.ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ರಾಜಾರಾಮ್ ಮತದಾರರಲ್ಲಿ ವಿನಂತಿಸಿದರು.


ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಝೀರ್ ಮಠ, ವಿಟ್ಲ ಉಪ್ಪಿನಂಗಡಿ ಸೇವಾ ದಳದ ಅಧ್ಯಕ್ಷ ಸೀದ್ದಿಕ್ ಕೆಂಪಿ, ಯು.ಟಿ ತೌಸಿಫ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಅದಂ ಕುಂಞ ಹಾಜಿ, ಕಿಸಾನ್ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಗೌಡ, ಹನೀಫ್ ಬಗ್ಗುಮೂಳೆ, ಮಾಜಿ ಬ್ಲಾಕ್ ಅಧ್ಯಕ್ಷ ಪ್ರವೀಣ್ ಚಂದ್ರ ಅಳ್ವ, ಇಸಾಕ್ ಸಾಲ್ಮರ, ಉಮನಾಥ್ ಪೆರ್ನೆ, ಪದ್ಮನಾಭ ಪುಜಾರಿ ಅಳಿಕೆ, ಕೆದಿಲ ಪಂಚಾಯತ್ ಹಾಲಿ‌ ಸದಸ್ಯರು, ಮಾಜಿ ಉಪಾಧ್ಯಕ್ಷೆ ಬಿಫಾತು, ಪಂಚಾಯತ್ ಸದಸ್ಯರಾದ ಸುಲೈಮಾನ್, ಅಜೀಜ್, ಹುನೈಸ್, ಹರಿಣಾಕ್ಷಿ, ಮಾಜಿ ಕೆದಿಲ ಪಂಚಾಯತ್ ಅಧ್ಯಕ್ಷೆ ಶಕುಂತಲಾ, ವಲಯ ಅಧ್ಯಕ್ಷ ಪ್ರವೀಣ್ ಚಂದ್ರ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ನೂರುದ್ದಿನ್ ಸಾಲ್ಮರ, ಬೂತ್ ಅಧ್ಯಕ್ಷ ಹಂಝ ಗಡಿಯಾರ, ತಸ್ರಿಫ್ ಪಾಟ್ರಕೋಡಿ, ಸಾಹುಲ್ ಹಮೀದ್ ರವರು ಭಾಗವಹಿಸಿದ್ದರು.


ಕೆದಿಲ ವಲಯ ಕಾಂಗ್ರೆಸ್ ಪಕ್ಷದ ಎಲ್ಲಾ ಐದು ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ಕೆದಿಲ ವಲಯ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಕಾರ್ಯಕರ್ತರು ಶ್ರಮವಹಿಸಿ ದುಡಿಯುತ್ತಿದ್ದು ಚುನಾವಣಾ ದಿನಾಂಕದವರೆಗೊ ಇದೆ ರೀತಿ ಶ್ರಮಪಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರಿಗೆ ವಿಟ್ಲ ಉಪ್ಪಿನಂಗಡಿ ಬ್ಲಾಕ್ ನಲೇ ಅತಿ ಹೆಚ್ಚು ಮತಗಳನ್ನು ಕೆದಿಲ ವಲಯದಿಂದ ನೀಡುವ ಭರವಸೆಯನ್ನು ಕ
ಸ್ಥಳೀಯರಾದ NSUI ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.
✍️ ಅಬ್ದುಲ್ ಖಾದರ್ ಪಾಟ್ರಕೋಡಿ

Leave a Reply

Your email address will not be published. Required fields are marked *

error: Content is protected !!