ಸುಳ್ಯ: ಬೆಳ್ಳಂಬೆಳಗ್ಗೆ ಅಗ್ನಿ ಅವಘಡ-ದಿನಸಿ ಅಂಗಡಿ ಬೆಂಕಿಗಾಹುತಿ
ಸಾಮಾಗ್ರಿಗಳು ಸಂಪೂರ್ಣ ಭಸ್ಮ, ಸಾವಿರಾರು ರೂ. ನಷ್ಟ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಬಳಿ ದಿನಸಿ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ದಿನಸಿ ಸಾಮಾಗ್ರಿಗಳು ಸಂಪೂರ್ಣವಾಗಿ ಭಸ್ಮವಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಅರಂಬೂರಿನ ಕರ್ನಾಟಕ ಪ್ಲೈವುಡ್ ಫ್ಯಾಕ್ಟರಿಯ ಮುಂಭಾಗದಲ್ಲಿ ಇರುವ ಈ ಅಂಗಡಿ ದಿವಾಕರ ಮಾಸ್ತರ್ ಎಂಬುವವರಿಗೆ ಸೇರಿದ್ದಾಗಿತ್ತು. ಇಂದು ಮುಂಜಾನೆ ಸ್ಥಳೀಯ ರೋರ್ವರು ಅಂಗಡಿಯತ್ತ ಬರುತ್ತಿದ್ದ ಸಂದರ್ಭ ಕಟ್ಟಡದೊಳಗಿನಿಂದ ಬೆಂಕಿಯ ಹೊಗೆಯನ್ನು ಗಮನಿಸಿದ್ದು ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ಅಂಗಡಿಯ ಹಿಂಭಾಗದಲ್ಲಿ ಅಂಗಡಿ ಮಾಲಕ ದಿವಾಕರ ಮಾಸ್ತರ್ ರವರು ವಾಸ್ತವ್ಯ ವಿದ್ದುದರಿಂದ ಅವರಿಗೆ ವಿಷಯ ತಿಳಿಸಲಾಗಿದೆ.
ಬಳಿಕ ಸ್ಥಳೀಯರು ಸೇರಿ ಅಂಗಡಿಯ ಎದುರಿನ ಶೆಟರನ್ನುತೆರೆಯಲು ಪ್ರಯತ್ನಿಸಿದರು. ಆ ವೇಳೆ
ಇಡೀ ಬೆಂಕಿ ಆವರಿಸಿದ್ದು ಎಲ್ಲಾ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿತ್ತು .ವಿಷಯ ತಿಳಿದ ಸುಳ್ಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಊಹಿಸಲಾಗಿದ್ದು ಘಟನೆಯಿಂದ ಸುಮಾರು ರೂ. 8 ಲಕ್ಷಕ್ಕೂ ಮಿಕ್ಕಿ ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.