ಜೆಡಿಎಸ್ ಪಕ್ಷದ ಬಾವುಟವನ್ನು ಪುತ್ತೂರಿನಲ್ಲಿ ಹಾರಿಸುತ್ತೇವೆ, ಜೆಡಿಎಸ್ ಏನೆಂದು ದ.ಕ ಜಿಲ್ಲೆಯಲ್ಲಿ ನಾವು ತೋರಿಸಿಕೊಡುತ್ತೇವೆ-ದಿವ್ಯಪ್ರಭಾ ಗೌಡ
ಬೆಂಗಳೂರು: ಬೇರೆ ಪಕ್ಷಗಳು “ನಾವು ನುಡಿದಂತೆ ನಡೆದಿದ್ದೇವೆ” ಎಂದು ಹೇಳುತ್ತಿದ್ದು ಅದೆಲ್ಲ ಸುಳ್ಳು, ನುಡಿದಂತೆ ನಡೆಯುವ ಪಕ್ಷ ಇದ್ದರೆ ಅದು ಜೆಡಿಎಸ್ ಮಾತ್ರ ಎಂದು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಇಂದು ಸೇರ್ಪಡೆಗೊಂಡ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಹೇಳಿದರು.

ಬೆಂಗಳೂರು ಜೆಪಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು ಜೆಡಿಎಸ್ ಏನೆಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ತೋರಿಸಿಕೊಡುತ್ತೇವೆ, ಜೆಡಿಎಸ್ ಪಕ್ಷದ ಬಾವುಟವನ್ನು ಪುತ್ತೂರಿನಲ್ಲಿ ಹಾರಿಸುತ್ತೇವೆ ಎಂದು ಹೇಳಿದರು.
ನಮಗೆ ಕ್ಷಣಿಕವಾದ ಯಾವುದೇ ಲಾಭಗಳು ಬೇಡ. ದೀರ್ಘವಾದ ಲಾಭಗಳು ಬೇಕಾಗಿದೆ. ಅದಕ್ಕಾಗಿ ಜನತಾ ದಳವನ್ನು ಎಲ್ಲರೂ ಬೆಂಬಲಿಸಬೇಕಾಗಿದೆ ಎಂದ ಅವರು ಜೆಡಿಎಸ್ ಪಕ್ಷ ಶಿಸ್ತಿನ ಪಕ್ಷ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಹಿತ ಪ್ರಮುಖರು ಉಪಸ್ಥಿತರಿದ್ದರು.