ಸುಳ್ಯ: ಮದುವೆ ಹಾಲ್ ಗೆ ಬಂದ ಮಹಿಳೆಗೆ ಇರಿಯಲು ಹೋದ ವ್ಯಕ್ತಿ, ಬಳಿಕ ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು
ಸುಳ್ಯದ ಗೂನಡ್ಕ ಸಮೀಪ ಸಭಾಂಗಣವೊಂದರಲ್ಲಿ ಮದುವೆಗೆ ಬಂದಿದ್ದ ಮಹಿಳೆಯನ್ನು ಓರ್ವ ವ್ಯಕ್ತಿ ಇರಿಯಲು ಹೋಗಿ ಬಳಿಕ ಆತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇದೀಗ ವರದಿಯಾಗಿದೆ.

ಸುಳ್ಯ ತಾಲೂಕಿನ ಗೂನಡ್ಕ ಸಜ್ಜನ ಸಭಾಂಗಣದಲ್ಲಿ ಇಂದು ಮದುವೆ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಮೂಲದ ವಸಂತ ಎಂಬವರು ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯೊರ್ವರನ್ನು ತನ್ನ ಬಳಿ ಇದ್ದ ಸ್ಕ್ರೂ ಡ್ರೈವ್ ನಿಂದ ಇರಿಯಲು ಯತ್ನಿಸಿದಾಗ ಮಹಿಳೆ ತಪ್ಪಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಅದನ್ನು ಕಂಡ ಸಭಾಂಗಣದಲ್ಲಿ ಸೇರಿದ ಜನರು ವಸಂತರನ್ನು ತಡೆದು ಹೊರಗೆ ಎಳೆದು ತಂದರೆಂದೂ
ನಂತರ ವಸಂತ ಕೋಪದಿಂದ ಮಹಿಳೆಗೆ ಬೈಯುತ್ತಾ ಅಲ್ಲಿಂದ ತೆರಳಿ ಪಕ್ಕದ ತೋಟದ ಬಳಿ ಹೋಗಿದ್ದಾರೆ ಎನ್ನಲಾಗಿದೆ.
ನಂತರ ಕೆಲವರು ಆತನನ್ನು ನೋಡಲು ಹೋದಾಗ ತೋಟದಲ್ಲಿ ಬಿದ್ದಿದ್ದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆನ್ನಲಾಗಿದೆ. ಕೂಡಲೇ ಸ್ಥಳೀಯರು
ಅವರನ್ನು ಸುಳ್ಯ ಅಸ್ಪತ್ರೆಗೆ ಕೊಡೋಯ್ದು ದಾಖಲಿಸಿದ್ದು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.