ಸುಳ್ಯ: ಕೆರೆಗೆ ಬಿದ್ದಿದ್ದ ಆನೆಗಳ ರಕ್ಷಣಾ ಕಾರ್ಯ ಯಶಸ್ವಿ
ನಾಲ್ಕು ಕಾಡಾನೆಗಳು ಕಾಡಿನತ್ತ ಪಯಣ
ಸುಳ್ಯದ ಅಜ್ಜಾವರ ಗ್ರಾಮದ ತುದಿಯಡ್ಕದ ತೋಟದ ಕೆರೆಗೆ ನಿನ್ನೆ ರಾತ್ರಿ ಬಿದ್ದಿದ್ದ ಕಾಡಾನೆಯನ್ನು ಮೇಲೆತ್ತುವ ಕಾರ್ಯ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಜನತೆಯ ಹರ ಸಾಹಸದಿಂದ ಯಶಸ್ವಿಯಾಗಿದೆ.

ಕೆರೆಯ ಒಂದು ಭಾಗದಲ್ಲಿ ಅಗೆದು ಆನೆಗಳಿಗೆ ಮೇಲೆ ಬರಲು ವ್ಯವಸ್ಥೆ ನಿರ್ಮಿಸಲಾಯಿತು. ಈ ಸಂದರ್ಭ ದೊಡ್ಡ ಎರಡು ಆನೆಗಳು ಮೇಲೆ ಬಂದು ಕಾಡಿನತ್ತ ಪಯಣ ಹೊರಟರೆ ಎರಡು ಮರಿಯಾನೆಗಳನ್ನು ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯ ಸಾರ್ವಜನಿಕರು ಮೇಲೆ ಬರಲು ಸಹಕರಿಸಿದರು.
ಹಗ್ಗದ ಮೂಲಕ ಒಂದು ಆನೆಮರಿಯನ್ನು ಮೇಲೆತ್ತುವ ಪ್ರಯತ್ನ ನಡೆಯಿತು.ಕೆಲ ಹೊತ್ತು ಆನೆಮರಿ ನೀರಿನಲ್ಲಿ ಸುಸ್ತಾಗಿದ್ದು ಸರಿಯಾಗಿ ನಡೆದಾಡಲೂ ಸಾಧ್ಯವಾಗದಿದ್ದರಿಂದ ಅಲ್ಪ ಸಮಸ್ಯೆ ಎದುರಿಸಿತು.