ಮಂಗಳೂರು: ಮೀನು ಹಿಡಿಯುವ ಬಲೆಯ ಸಂಗ್ರಹಾಗಾರದಲ್ಲಿ ಬೆಂಕಿ ಅವಘಡ, ಲಕ್ಷಾಂತರ ರೂ. ನಷ್ಟ
ಮಂಗಳೂರು: ಮಂಗಳೂರಿನ ಹೊರವಲಯದ ಕಸಬಾ ಬೆಂಗರೆಯಲ್ಲಿ ಮೀನುಗಾರಿಕೆಗೆ ಬಳಸಲಾಗುವ ಮೀನುಹಿಡಿಯುವ ಬಲೆಯ ಸಂಗ್ರಹಾಗಾರದಲ್ಲಿ ಬೆಂಕಿ ಹಿಡಿದಿದ್ದು, ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.
ಎರಡು ವಾರಗಳ ಹಿಂದೆ ಇಲ್ಲಿ ಬೀಕರ ಅಗ್ನಿ ದುರಂತ ಸಂಭವಿಸಿ ಸರಕು ಸಾಗಾಟದ ಮೂರು ಬೃಹತ್ ಬೋಟುಗಳು ಸುಟ್ಟು ಕರಕಲಾಗಿದ್ದು, ಅಪಾರ ನಷ್ಟ ಉಂಟಾಗಿತ್ತು.
ಅಕ್ಟೋಬರ್ 28ರಂದು ನಡೆದ ಭೀಕರ ಅಗ್ನಿ ದುರಂತ ಮಾಸುವ ಮುನ್ನವೇ ಇದೀಗ ಮಂಗಳೂರು ದಕ್ಕೆ ಯಾರ್ಡಿನಲ್ಲಿ ನಿನ್ನೆ ಮಧ್ಯರಾತ್ರಿ ಸುಮಾರು 12.30ಕ್ಕೆ ಮತ್ತೆ ಬೆಂಕಿ ದುರಂತ ಸಂಭವಿಸಿದೆ.
ವಿಚಾರ ತಿಳಿಯುತ್ತಿದ್ದಂತೆ ಪಾಂಡೇಶ್ವರ ಅಗ್ನಿ ಶಾಮಕ ತಂಡದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ.