ಕ್ರೀಡೆರಾಷ್ಟ್ರೀಯ

49 ರೂ ಕಟ್ಟಿ 1.50 ಕೋಟಿ ರೂ ಬಹುಮಾನ ಗೆದ್ದ ಬಡ ಆಟೋ ಚಾಲಕ: ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಯ ಜೀವನವನ್ನೇ ಬದಲಾಯಿಸಿದ ಐಪಿಎಲ್‌

ಕೇವಲ 49.ರೂ ಕಟ್ಟಿ 1.50 ಬಹುಮಾನವನ್ನು ಬಡ ವ್ಯಕ್ತಿಯೋರ್ವರು ಗೆದ್ದುಕೊಂಡಿದ್ದಾರೆ. ವೃತ್ತಿಯಲ್ಲಿ ಚಾಲಕನಾಗಿರುವ ಶಹಾಬುದ್ದೀನ್ ಮನ್ಸೂರಿ ಕಳೆದ ಎರಡು ವರ್ಷಗಳಿಂದ ಆನ್ಲೈನ್‌ ಗೇಮಿಂಗ್‌ ಆ್ಯಪ್ ನಲ್ಲಿ ಟೀಮ್‌ ಮಾಡಿ ಅದೃಷ್ಟವನ್ನು ಪರೀಕ್ಷೆ ಮಾಡಿಸುತ್ತಲೇ ಇದ್ದರು. ಬಾನುವಾರ ಐಪಿಎಲ್‌ ನಲ್ಲಿ ನಡೆದ ಕೆಕೆಆರ್‌ ಹಾಗೂ ಪಂಜಾಬ್‌ ನಡುವಿನ ಪಂದ್ಯಕ್ಕೆ ತಮ್ಮ ಕನಸಿನ ತಂಡವನ್ನು ಮಾಡಿ 49 ರೂ ಕಟ್ಟಿದ್ದರು. ಇದೀಗ ಕಟ್ಟಿದ 49 ರೂ ಅವರ ಜೀವನವನ್ನೇ ಬದಲಾಯಿಸಿಬಿಟ್ಟಿದೆ.

ಕೋಟಿ ಗೆಲ್ಲುವ ವಿಭಾಗದಲ್ಲಿ ತಂಡವನ್ನು ಕಟ್ಟಿದ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಶಹಾಬುದ್ದೀನ್ ಮನ್ಸೂರಿ ಪಂದ್ಯ ಮುಗಿದ ಬಳಿಕ ಕೋಟಿ ಗೆದ್ದಿದ್ದಾರೆ. ಶಹಾಬುದ್ದೀನ್ ಮನ್ಸೂರಿ ಅವರು 1.50 ಕೋಟಿ ರೂ.ವನ್ನು ಗೆಲ್ಲುವ ಮೂಲಕ ಅವರ ಜೀವನವೇ ಬದಲಾಗಿದೆ.

ಶಹಾಬುದ್ದೀನ್ ತನ್ನ ರೂ 20 ಲಕ್ಷವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ವಿಜೇತ ಮೊತ್ತದ 1.5 ಕೋಟಿ ರೂ.ನಲ್ಲಿ ಒಟ್ಟು ರೂ.6 ಲಕ್ಷ ತೆರಿಗೆಯಾಗಿ ಕಡಿತವಾಗುತ್ತದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!