ಪುತ್ತೂರು ಜಿ.ಎಲ್ ಒನ್ ಮಾಲ್‌ನಲ್ಲಿ ಶುಭಾರಂಭಗೊಂಡಿದೆ
“WHITE TAG” ಮೆನ್ಸ್ ಮಲ್ಟಿ ಬ್ರಾಂಡೆಡ್ ಡ್ರೆಸ್ ಶೋರೂಂ
ಪುತ್ತೂರು: ಮುತ್ತಿನ ನಗರಿ ಪುತ್ತೂರಿಗೆ ಹೆಸರಾಂತ ಬ್ರಾಂಡೆಡ್ ಡ್ರೆಸ್ ಶೋರೂಮ್ ಎಂಟ್ರಿ ಕೊಟ್ಟಿದೆ. ಕಾಸರಗೋಡು ಹಾಗೂ ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಲ್ಟಿ ಬ್ರಾಂಡೆಡ್ ಶೋರೂಂ ‘ವೈಟ್ ಟ್ಯಾಗ್’ ಎಪ್ರಿಲ್ 1ರಂದು ಪುತ್ತೂರು ಜಿ.ಎಲ್ ಒನ್ ಮಾಲ್‌ನಲ್ಲಿ ಶುಭಾರಂಭಗೊಂಡಿತು.
ನೂತನ ಶೋರೂಂನ್ನು ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಉದ್ಘಾಟಿಸಿ ದುವಾ ನೆರವೇರಿಸಿ ಶುಭ ಹಾರೈಸಿದರು.
ಜಿ.ಎಲ್ ಸಮೂಹ ಸಂಸ್ಥೆಗಳ ಚೇರ್‌ಮೆನ್ ಜಿ.ಎಲ್ ಬಲರಾಮ್ ಆಚಾರ್ಯ ಮಾತನಾಡಿ ಸುಸಜ್ಜಿತವಾಗಿರುವ ವೈಟ್ ಟ್ಯಾಗ್ ಬ್ರಾಂಡೆಡ್ ಡ್ರೆಸ್ ಶೋರೂಂ ಜಿ.ಎಲ್ ಮಾಲ್‌ನಲ್ಲಿ ಶುಭಾರಂಭಗೊಂಡಿರುವುದು ಬಹಳ ಸಂತೋಷ ತಂದಿದೆ. ಈ ಶೋರೂಂನಲ್ಲಿ ತುಂಬ ಕಂಪೆನಿಗಳ ಡ್ರೆಸ್ ಸಂಗ್ರಹ ಇದೆ. ಇದು ನೂರಕ್ಕೆ ನೂರು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮುಹಮ್ಮದ್ ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎಂ.ಬಿ ವಿಶ್ವನಾಥ ಒಳಮೊಗ್ರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ನಗರಸಭಾ ಮಾಜಿ ಸದಸ್ಯ ಎಚ್ ಮಹಮ್ಮದ್ ಆಲಿ ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಪ್ರಥಮ ಖರೀದಿ:
ವೈಟ್ ಟ್ಯಾಗ್ ಡ್ರೆಸ್ ಮಳಿಗೆಯಿಂದ ಜಿ.ಎಲ್ ಒನ್ ಮಾಲ್‌ನ ಮಾಲಕರಾದ ಜಿ.ಎಲ್ ಬಲರಾಮ್ ಆಚಾರ್ಯ ಅವರು ಪ್ರಥಮ ಖರೀದಿ ಮಾಡಿ ವೈಟ್ ಟ್ಯಾಗ್‌ನ ಮಾಲಕ ಬಶೀರ್ ಇಂದ್ರಾಜೆಯವರಿಂದ ಉಡುಪನ್ನು ಸ್ವೀಕರಿಸಿದರು. ನಂತರ ಅನೇಕ ಅತಿಥಿಗಳು ಕೂಡಾ ಡ್ರೆಸ್ ಖರೀದಿ ಮಾಡಿದರು.
ವಿವಿಧ ಕಂಪೆನಿಗಳ ಡ್ರೆಸ್ ಇಲ್ಲಿದೆ:
‘ವೈಟ್ ಟ್ಯಾಗ್’ ಡ್ರೆಸ್ ಶೋರೂಂ ಪುರುಷರ ಮಲ್ಟಿ ಬ್ರಾಂಡೆಡ್ ಶೋರೂಮ್ ಆಗಿದ್ದು ಕ್ಲಬ್‌ಸ್ಟೋನ್, ಬ್ಲಾಕ್‌ಬೆಬೆರೀಸ್, ಹೈಬೆರಿಲ್, ಪೀಟರ್ ಇಂಗ್ಲಂಡ್, ಸೀನಿಯರ್, ರಾಸ್ಟಾರ್, ಪಾನ್‌ಅಮೇರಿಕಾ, ಅಟೆಲಿಯರ್, ಫ್ರಿಯೋ, ಇಂಡಿಯನ್ ಟೆರೈನ್, ಯುಥೋಪಿಯ, ಪಾರ್ಕ್ಸ್, ಫೆಟೆ, ಐರಿಶ್ ಬ್ಲೂ, ರಿವರ್ ಬ್ಲೂ, ರಾಮ್‌ರಾಜ್, ಪಾರ್ಕ್ ಅವೆನ್ಯೂ, ಫ್ಲೈಯಿಂಗ್ ಮೆಶಿನ್, ಹೆನೀಸ್, ಪೀಟರ್‌ಮೆನ್, ಯುನಿಬ್ರೊ, ಸೇರಿದಂತೆ ವಿವಿಧ ಬ್ರಾಂಡೆಡ್ ಕಂಪೆನಿಗಳ ಪುರುಷರ ಉಡುಪುಗಳು ಲಭ್ಯವಿದೆ. ಶೋರೂಮ್‌ನಲ್ಲಿ ವಿಶಾಲ ಸ್ಥಳಾವಕಾಶವಿದ್ದು ಗ್ರಾಹಕರಿಗೆ ಖರೀದಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
10% ಆಫರ್..!
ಶುಭಾರಂಭದ ಪ್ರಯುಕ್ತ ಸೀಮಿತಿ ಅವಧಿಯ ಆಫರ್ ಪ್ರಕಟಿಸಲಾಗಿದ್ದು ೧೦% ಆಫರ್ ನೀಡಲಾಗಿದೆ ಎ.೨ರಂದು ಆಫರ್ ಪ್ರಾರಂಭಗೊಂಡಿದ್ದು ಎ.೯ರ ವರೆಗೆ ಈ ಆಫರ್ ಇರಲಿದೆ ಎಂದು ವೈಟ್ ಟ್ಯಾಗ್ ಶೋರೂಂ ಮ್ಯಾನೇಜರ್ ಪ್ರಶಾಂತ್ ತಿಳಿಸಿದ್ದಾರೆ.
ಪುತ್ತೂರಿನಲ್ಲಿ 3ನೇ ಶೋರೂಂ:
ವೈಟ್ ಟ್ಯಾಗ್ ಡ್ರೆಸ್ ಶೋರೂಂ ಮಾಲಕ ಬಶೀರ್ ಇಂದ್ರಾಜೆ ಮಾತನಾಡಿ ಪುತ್ತೂರಿನ ಜಿ.ಎಲ್ ಒನ್ ಮಾಲ್‌ನಲ್ಲಿ ಮಲ್ಟಿ ಬ್ರಾಂಡೆಡ್ ಶೋರೂಂ ವೈಟ್ ಟ್ಯಾಗ್ ೩ನೇ ಶೋರೂಂನ್ನು ತೆರೆದಿದ್ದೇವೆ. ಈಗಾಗಲೇ ನಮ್ಮ ಶೋರೂಂ ಕಾಸರಗೋಡು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದ್ದು ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇಲ್ಲಿ ಶುಭಾರಂಭಗೊಂಡಿರುವ ವೈಟ್ ಟ್ಯಾಗ್ ಶೋರೂಂನಲ್ಲಿ ಅನೇಕ ಕಂಪೆನಿಗಳ ಪುರುಷರ ಬ್ರಾಂಡೆಡ್ ಉಡುಪುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಗ್ರಾಹಕರ ಸಹಕಾರವನ್ನು ಬಯಸಿದರು.
ಉದ್ಯಮಿ ರಫೀಕ್ ದರ್ಬೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಇಫ್ತಾರ್ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸ್ಟೋರ್ ಮ್ಯಾನೇಜರ್ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.