ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮಗನಿಗೆ ದುಬಾರಿ ಬೆಲೆಯ ಐಫೋನ್ ಉಡುಗೊರೆ ನೀಡಿದ ಬಡ ತಂದೆ
ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಖುಷಿಯಲ್ಲಿ ಬಡ ತಂದೆಯೋರ್ವರು ಮಗನಿಗೆ 1.80 ಲಕ್ಷ ಬೆಲೆಯ ಐಫೋನ್ ಮೊಬೈಲ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗುಜರಿ ವ್ಯಾಪಾರ ಮಾಡುತ್ತ ಜೀವನ ನಡೆಸುವ ಬಡ ವ್ಯಕ್ತಿಯೊಬ್ಬರು ತನ್ನ ಮಗ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ಪಾಸ್ ಆಗಿದ್ದಾನೆ ಎಂಬ ಖುಷಿಗೆ ಆತನಿಗೆ 1.80 ಲಕ್ಷ ಬೆಲೆಯ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಈ ಬಡ ತಂದೆಯ ಆಸೆಯಂತೆ ಮಗ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದು, ಇದಕ್ಕೆ ಪ್ರತಿಯಾಗಿ ಮಗನಿಗೆ ಏನಾದ್ರೂ ಉಡುಗೊರೆ ನೀಡಬೇಕೆಂದು ಬಯಸಿ ಐಫೋನ್ ಗಿಫ್ಟ್ ನೀಡಿದ್ದಾರೆ. ತನಗಾಗಿ 85 ಸಾವಿರ ಮೌಲ್ಯದ ಐಪೋನ್ ಮತ್ತು ಮಗನಿಗಾಗಿ 1.80 ಲಕ್ಷದ ಐಫೋನ್ ಖರೀದಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದೀಗ ಆ ವಿಡಿಯೋಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.