ಅಂತಾರಾಷ್ಟ್ರೀಯಕ್ರೀಡೆ

ಆಸೀಸ್ ಸೋಲಿಸಿ, ಫೈನಲ್ ಗೆ ಲಗ್ಗೆ ಇಟ್ಟ ಭಾರತ


ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಗುರುವಾರ ರಾತ್ರಿ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್ ಅಂತರದಿಂದ ಸೋಲಿಸಿದ ಭಾರತ, ಫೈನಲ್ ಗೆ ಅರ್ಹತೆ ಪಡೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಲಿಚ್ ಫೀಲ್ಡ್ ಅವರ ಭರ್ಜರಿ ಶತಕ (119) ನೆರವಿನಿಂದ 50 ಓವರ್ ಗಳಲ್ಲಿ 338 ರನ್ ಗಳಿಸಿತ್ತು. ಭಾರತ ಪರ ಬೌಲರ್ ಗಳಾದ ದೀಪ್ತಿ ಶರ್ಮಾ, ಶ್ರೀ ಚಾರಣಿ ತಲಾ 2 ವಿಕೆಟ್ ಪಡೆದರೆ, ಅಮಾನ್ ಜೋತ್ ಕೌರ್, ರಾಧಾ ಯಾದವ್, ಕ್ರಾಂತಿ ಗೌಡ್ ತಲಾ ಒಂದೊಂದು ವಿಕೆಟ್ ಪಡೆದರು.


ಆಸೀಸ್ ನೀಡಿದ ಬೃಹತ್ ರನ್ ಗಳ ಬೆನ್ನತ್ತಿದ್ದ ಭಾರತ ತಂಡ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ 10, ಸ್ಮೃತಿ ಮಂಧಾನ ಕೇವಲ 24 ರನ್ ಗಳಿಸಿ ಔಟಾದರು.
ಬಳಿಕ ಜೆಮಿಮಾ ರೋಡ್ರಿಗಸ್ ಅವರ ಆಕರ್ಷಕ ಶತಕ (127) ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅರ್ಧ ಶತಕ (89), ದೀಪ್ತಿ ಶರ್ಮಾ 24, ರಿಚಾ ಘೋಷ್ 26 ಹಾಗೂ ಅಮಾನ್ ಜೋತ್ ಕೌರ್ ಅವರ 15 ರನ್ ಗಳ ನೆರವಿನಿಂದ 48.3 ಓವರ್ ಗಳಲ್ಲಿ ಇನ್ನೂ 9 ಎಸೆತ ಬಾಕಿಯಿರುವಂತೆಯೇ ಗೆಲುವಿನ ನಗೆ ಬೀರಿತು. ಜೆಮಿಮಾ ರೋಡ್ರಿಗಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಭಾರತ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

Leave a Reply

Your email address will not be published. Required fields are marked *

error: Content is protected !!