ಸುಳ್ಯ: ಗುರುವಮೊಟ್ಟೆ ಬಳಿ ಕೃಷಿ ತೋಟಕ್ಕೆ ಆನೆ ದಾಳಿ, ಹಾನಿ
ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಗುರುವಮೊಟ್ಟೆ ಎಂಬಲ್ಲಿ ಫೆ.11ರಂದು ಮುಂಜಾನೆ ಇಬ್ರಾಹಿಂ ಎಂಬುವವರ ಕೃಷಿ ತೋಟಕ್ಕೆ ಆನೆ ನುದ್ದು ತೆಂಗಿನ ಗಿಡ ಸೇರಿದಂತೆ ಕೆಲವು ಗಿಡಗಳನ್ನು ನಾಶ ಮಾಡಿದೆ.

ಮನೆಯ ಯಜಮಾನ ಇಬ್ರಾಹಿಂ ಆಕಾಶ್ ಎಂಬುವವರು ಬೆಳಿಗ್ಗೆ ಎದ್ದು ನೋಡಿದಾಗ ಮನೆಯ ಮುಂಭಾಗದ ಗೇಟಿನ ಬಳಿ ಇರುವ ತೆಂಗಿನ ಗಿಡ ಆನೆ ದಾಳಿಗೆ ತುತ್ತಾಗಿರಿವ ದೃಶ್ಯ ಕಂಡು ಬಂದಿದೆ.
ಪರಿಶೀಲನೆ ನಡೆಸಿದಾಗ ಅಲ್ಲೇ ಸಮೀಪದಲ್ಲಿದ್ದ ಕೆಲವು ಬಾಳೆ ಗಿಡಗಳನ್ನು ಕೂಡ ಆನೆಗಳು ನಾಶ ಮಾಡಿರುವುದು ಕಂಡುಬಂದಿದೆ. ಈ ಘಟನೆಯಿಂದ ಇದೀಗ ಸ್ಥಳೀಯರು ಆತಂಕದಲ್ಲಿದ್ದಾರೆ.