ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನಾಚರಣೆ
ಪುತ್ತೂರು: ಮೇನಾಲ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು ಪೂರಕವಾಗುವ ವಿವಿಧ ಪ್ರಾಣಾಯಾಮಗಳು ಹಾಗೂ ಶಾರೀರಿಕ ದೃಢತೆಯನ್ನು ಉಂಟುಮಾಡುವ ಯೋಗಾಸನದ ವಿವಿಧ ಭಂಗಿಗಳ ಪ್ರದರ್ಶನ, ಮಾಹಿತಿಯೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಗುರು ರಾಜೇಶ್ ಆರ್.ಎಸ್ ಯೋಗದಿನದ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿ ಅಬ್ದುರಹಿಮಾನ್, ಅಡ್ಮಿನ್ ಆಫೀಸರ್ ನಾಸಿರ್, ಮೇನೇಜರ್ ಖದೀಜತ್ ರೈಹಾನ ಹಾಗೂ ಶಿಕ್ಷಕ -ಶಿಕ್ಷಕಿಯರು ಉಪಸ್ಥಿತರಿದ್ದರು.