ಪುತ್ತೂರು: ಅಲ್ ಇಖ್ವಾನ್ ಚಾರಿಟಿ ಫೌಂಡೇಶನ್ ಉದ್ಘಾಟನೆ, ರಕ್ತದಾನ ಶಿಬಿರ
ಪುತ್ತೂರು: ಅಲ್ ಇಖ್ವಾನ್ ಚಾರಿಟಿ ಫೌಂಡೇಶನ್ ಇದರ ಉದ್ಘಾಟನಾ ಸಮಾರಂಭ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಪರ್ಲಡ್ಕ ಜುಮಾ ಮಸೀದಿ ಖತೀಬರಾದ ರಶೀದ್ ರಹ್ಮಾನ್ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಲಯನ್ಸ್ ಕ್ಲಬ್ ಪುತ್ತೂರು ಹಾಗೂ ಪಾಣಾಜೆ ಇದರ ಅಧ್ಯಕ್ಷರಾದ ಉದ್ಯಮಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಉದ್ಘಾಟನೆಗೈದರು.

ಮುಖ್ಯ ಅತಿಥಿಗಳಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಅಧ್ಯಕ್ಷರಾದ ಇಬ್ರಾಹಿಂ ಸಾಗರ್, ಬ್ಲಡ್ ಬ್ಯಾಂಕ್ ಅಧಿಕಾರಿಗಳಾದ ಪ್ರವೀಣ್ ಕುಮಾರ್,ಜಗನ್ನಿವಾಸ್ ರಾವ್, ಉದ್ಯಮಿ ನೌಶಾದ್ ಹಾಜಿ ಬೊಳ್ವಾರ್, ಸಾಮಾಜಿಕ ಕಾರ್ಯಕರ್ತರಾದ ಇಫಾಝ್ ಬನ್ನೂರು,ರಝಾಕ್ ಬಿಎಚ್, ಅಲಿ ಪರ್ಲಡ್ಕ ಹಾಗೂ ವಿದ್ಯಾರ್ಥಿ ಮುಖಂಡ ಬಾತಿಷ್ ಅಳಕೆಮಜಲು ಉಪಸ್ಥಿತರಿದ್ದರು.

ಸಮಾಜದಲ್ಲಿರುವ ಬಡವರ ಕಲ್ಯಾಣಕ್ಕಾಗಿ, ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ನೆರವಿಗಾಗಿ ಸಹಾಯಹಸ್ತ ನೀಡುವ ಉದ್ದೇಶದೊಂದಿಗೆ ಅಲ್ ಇಖ್ವಾನ್ ಚಾರಿಟಿ ಫೌಂಡೇಶನ್(ರಿ) ನ್ನು ಸ್ಥಾಪಿಸಲಾಗಿದೆಯೆಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು. ಹಾರಿಸ್ ಕಾರ್ಯಕ್ರಮ ನಿರೂಪಿಸಿದರು.



