ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಆರೋಪ: ಘಟನೆ ನಡೆದು ಎರಡು ದಿನದ ಬಳಿಕ ಪೊಲೀಸ್ ದೂರು
ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಶಿವಪ್ಪ ನಾಯಕ್ ಎಂಬುವರ ಮೇಲೆ ಕಳೆದ ಎರಡು ದಿನಗಳ ಹಿಂದೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಎರಡು ದಿನದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ವರದಿಯಾಗಿದೆ.
ಅವರು ನೀಡಿರುವ ದೂರಿನಲ್ಲಿ ಹಲ್ಲೆ ನಡೆಸಿರುವ ಬಗ್ಗೆ ಉಲ್ಲೇಖಿಸಿಲ್ಲ ಕೇವಲ ಬೆದರಿಕೆ, ಗಲಾಟೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಅನಧಿಕೃತ ಲೇಔಟ್ ವಿಚಾರವಾಗಿ ಸ್ಥಳೀಯ ನಿವಾಸಿ ಕೃಷ್ಣ ಎಂಬುವವರು ಬೆದರಿಕೆ ಒಡ್ಡಿರುವ ಬಗ್ಗೆ ಮುಖ್ಯ ಅಧಿಕಾರಿ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.