ವರದಕ್ಷಿಣೆ ಕಿರುಕುಳ: ಪುಟ್ಟ ಮಗುವಿನೊಂದಿಗೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ
ಒಂದೂವರೆ ವರ್ಷದ ಮಗು ಜತೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಪತಿಯ ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಒಂದೂವರೆ ವರ್ಷದ ಮಗು ಯಕ್ಷಿತ್ ಜತೆ ಶ್ವೇತಾ(25. ವ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2 ವರ್ಷದ ಹಿಂದೆ ರಾಕೇಶ್ ಎಂಬಾತನನ್ನು ಶ್ವೇತಾ ಮದುವೆಯಾಗಿದ್ದರು. ಇದೀಗ ಕಿರುಕುಳದ ತಾಳದ ಪರಿಸ್ಥಿತಿಯಲ್ಲಿದ್ದ ಶ್ವೇತ ತನ್ನ ಪುಟ್ಟ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪಿ ರಾಕೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.