ರೆಹಮಾನ್ ಕೊಲೆ ಪ್ರಕರಣ: ಆರೋಪಿಗಳಿಗೆ ಕೋಕಾ, ಆರು ಮಂದಿಗೆ ಗೂಂಡಾ ಕಾಯ್ದೆ ಜಾರಿ
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ 54/2025ನೇ ಅಬ್ದುಲ್ ರೆಹಮಾನ್ ಕೊಳತ್ತಮಜಲು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಳವಡಿಸಲಾಗಿದೆ.

ಈ ಪ್ರಕರಣದ ಆರೋಪಿಗಳ ಪೈಕಿ ಭರತ್ ಕುಮ್ಡೇಲು (38), ಶಿವಪ್ರಸಾದ್ (33), ಪ್ರದೀಪ್ (34), ಅಭಿನ್ ರೈ (32), ತೇಜಾಕ್ಷ (24) ಹಾಗೂ ರಂಜಿತ್ (35) ವಿರುದ್ಧ ಕಾನೂನುಬದ್ಧವಾಗಿ ಗೂಂಡಾ ಕಾಯ್ದೆ ಅಳವಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


